ಪೆರ್ಲ : ಮೊಗೇರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಆರ್.ಎಸ್.ಬಿ. ಯುವ ಸಂಘ, ಮೊಗೇರು ಇದರ ವತಿಯಿಂದ ಶ್ರೀದೇವಳದ ಆಡಳಿತ ಸಮಿತಿಯ ಪೂರ್ಣ ಸಹಕಾರದೊಂದಿಗೆ ವೇದಮೂರ್ತಿ ಬಾಲಕೃಷ್ಣ ಭಟ್, ಪಾಲೆಚ್ಚಾರು ಇವರ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ವರದ ಶಂಕರ ವ್ರತ ಹಾಗೂ ಶ್ರೀದೇವಿಗೆ ವಿಶೇಷ ರಂಗಪೂಜೆ, ದೀಪಾಲಂಕಾರ ಸೇವೆ ಒ.31ಕ್ಕೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ, ಆಡಳಿತ ಮೋಕ್ತೆಸರ ರಾಮಚಂದ್ರ ನಾಯಕ್ ಅಲ್ಚಾರು, ಮೊಕ್ತೇಸರ ದೇವಾನಂದ ಶರ್ಮ ಪಂಜಿಕಲ್ಲು, ಸದಾಶಿವ ನಾಯಕ್ ನೆರೋಳು,ಜಿ ಕೆ ನಾಯಕ್ ಪಳ್ಳಕಾನ, ವಿಷ್ಣು ಪ್ರಭು ಕರಿಂಬಿಲ, ಶಂಕರ್ ನಾಯಕ್ ಆಜೇರು, ಸೇವಾಸಮಿತಿ ಉಪಾಧ್ಯಕ್ಷÀ ಉಮೇಶ್ ನಾಯಕ್ ಆಲ್ಚಾರ್, ಅರ್ಚಕ ಚಂದ್ರಶೇಖರ ಭಟ್ ಮೊಗೇರು ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ಮೋಹಿನಿ ಮಾಧವ ನಾಯಕ್ ನೇರೋಳು, ಪವಿತ್ರ ಪದ್ಮನಾಭ ಬೋರ್ಕರ್ ಪಾಂಡಿಗಯ, ಭಜನಾ ಸಮಿತಿ ಸದಸ್ಯರು ಹಾಗೂ ಯುವ ಸಂಘದ ಅಧ್ಯಕ್ಷ ಸತೀಶ್ ಭಟ್, ಕಾರ್ಯದರ್ಶಿ ಬಿ.ಎಸ್. ನಾಯಕ್, ಸದಸ್ಯರಾದ ಹರಿ ಭಟ್ ವೊಗ್ಗ, ನವೀನ್ ನಾಯಕ್ ಉಕ್ಕಿನಡ್ಕ ಮೊದಲಾದವರು ಉಪಸ್ಥಿತರಿದ್ದರು.