HEALTH TIPS

ಓಣಂಸದ್ಯ: ಬಾಳೆಎಲೆಗೆ ಹೆಚ್ಚಿದ ಬೇಡಿಕೆ: ಎಂಟು ರೂಪಾಯಿವರೆಗೆ ಮಾರಾಟ

ತಿರುವನಂತಪುರಂ: ‘ಓಣಂ’ ಎಂದಾಕ್ಷಣ ಕೇರಳೀಯರಿಗೆ ಮೊದಲು ನೆನಪಾಗುವುದು ಸದ್ಯ. ವಿವಿಧ ಬಗೆಯ ಭಕ್ಷ್ಯಭೋಜ್ಯಗಳೊಂದಿಗೆ ಓಣಂಸದ್ಯ ಸವಿಯಲು ಉತ್ತಮ ಸ್ಥಳೀಯ ಬಾಳೆ ಎಲೆಯಲ್ಲಿ ಬಡಿಸಿದಾಗ ನಾಲಿಗೆಗೆ ರುಚಿಕರವಾಗಿರುತ್ತದೆ.

ನೂರೆಂಟು ಪದಾರ್ಥಗಳಿದ್ದರೂ ಮಲೆಯಾಳಿಗೆ ಸದ್ಯ ಸುಖಕರವಾಗಲು ಬಾಳೆಎಲೆಯೇ ಬೇಕು, ಅದೂ ಒಳ್ಳೆಯ ಹಸಿರುಹಸಿರಿನ ಎಲೆಯಾಗಬೇಕು.ಎಳತಾಗಿರಬೇಕು. ಆದರೆ ಈ ಬಾರಿ ಮಲಯಾಳಿಗಳಿಗೆ ಬಾಳೆ ಎಲೆಗಳ ಬೆಲೆಗಳಿಂದ ತತ್ತರಿಸಿದರು. 

ಮಲೆಯಾಳಿಗಳ ತೋಟದಲ್ಲೂ ಬಾಳೆ ಕೃಷಿ ಕೈ ಬಿಟ್ಟಿರುವುದರಿಂದ ಓಣಂ ಸಂದರ್ಭದಲ್ಲಿ ಅಂಗಡಿಗಳಲ್ಲಿ ಬಾಳೆ ಎಲೆಗಳಿಗೆ ಬೇಡಿಕೆ ಹೆಚ್ಚಿದೆ. ಬಾಳೆಎಲೆಯ ಬೆಲೆ ಕೇಳಿ ಓಣಂಗೆ ಬಾಳೆ ಬದಲಿಗೆ ಬೇರೆದಾರಿ ಹುಡುಕಾಡಿದರೂ ಆಶ್ಚರ್ಯವಿಲ್ಲ.

ಸ್ಥಳೀಯ ಎಲೆಗಳು ಲಭ್ಯವಿಲ್ಲದ ಕಾರಣ, ಓಣಂ ಸಮಯದಲ್ಲಿ ಹೆಚ್ಚಾಗಿ ತಮಿಳುನಾಡಿನ ಎಲೆಗಳು ಮಾರುಕಟ್ಟೆಗೆ ಬರುತ್ತವೆ. ಕೇರಳದ ಓಣ ಮಾರುಕಟ್ಟೆಯು ತಮಿಳುನಾಡಿನ ಬಾಳೆ ರೈತರಿಗೆ ಪ್ರಮುಖ ಆದಾಯದ ಮೂಲವಾಗಿದೆ.

ಹೋಟೆಲುಗಳು, ಕೇಟರಿಂಗ್ ಘಟಕಗಳು ಓಣಸದ್ಯ ಕೈಗೆತ್ತಿಕೊಂಡಿರುವುದರಿಂದ ಎಲೆಗಳ ಬೇಡಿಕೆಯೂ ಹೆಚ್ಚಿದೆ. ಬೆಲೆ ಏರಿಕೆಗೆ ಇದೂ ಒಂದು ಕಾರಣ. ಈ ಬಾರಿ 10, 20, 25 ಎಲೆಗಳನ್ನು ಖರೀದಿಸಿ ಓಣ ದಿನಗಳಲ್ಲಿ ಊಟ ಬಡಿಸುವವರೇ ಹೆಚ್ಚು ಎನ್ನುತ್ತಾರೆ ವ್ಯಾಪಾರಿಗಳು.

ಓಣಸದ್ಯಕ್ಕೆ ಎಲೆ ಕೊಳ್ಳಲು ಬರುವವರಿಗೆ ಹಾಳಾದ, ಹರಿದ ಎಲೆಗಳನ್ನು ಬಳಸದೆ ಒಳ್ಳೆಯದನ್ನೇ ಕೊಡುತ್ತಾರೆ. ಅದಕ್ಕಾಗಿಯೇ 8 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ. ಸಾಮಾನ್ಯ ಎಲೆಗಳಾದರೆ ಇಷ್ಟು ಬೆಲೆ ಬರುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಹೆಚ್ಚಿನ ವ್ಯಾಪಾರ ಉತ್ರಾಡಂ ದಿನವಾದ ಇಂದು ನಡೆರದಿದೆ. ನಾಳೆ ಮಧ್ಯಾಹ್ನದ ಭೋಜನಕ್ಕೂ ಎಲೆ ಬಳಸುವ ಕ್ರಮವಿದೆ. 

ಬಾಳೆ ಎಲೆಗಳು ಹೆಚ್ಚಾಗಿ ದಕ್ಷಿಣ ಕೇರಳದ ಮಾರುಕಟ್ಟೆಗಳಲ್ಲಿ ಕೇರಳದ ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳಿಂದ ಬರುತ್ತವೆ. ತಮಿಳುನಾಡಿನ ತೂತುಕುಡಿ, ಕೊಯಮತ್ತೂರು ಮತ್ತು ಥೇಣಿ ಮತ್ತು ಕರ್ನಾಟಕದ ಗಡಿಯಲ್ಲಿರುವ ಸತ್ಯಮಂಗಲದಿಂದ ಎಲೆಗಳನ್ನು ತಂದು ಮಾರಾಟಮಾಡಲಾಗುತ್ತದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries