ಕೊಚ್ಚಿ: ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಪಾದರಕ್ಷೆಯಲ್ಲಿ ಚಿನ್ನಾಭರಣ ಸಾಗಿಸಿರುವುದು ಕಂಡುಬಂದಿದ್ದು,ವಶಪಡಿಸಲಾಗಿದೆ. ಶೂಗಳೊಳಗೆ ಅಕ್ರಮವಾಗಿ ಸಾಗಿಸಲು ಯತ್ನಿಸಿದ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ.
ಕೌಲಾಲಂಪುರದ ಪ್ರಯಾಣಿಕರೊಬ್ಬರು ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾರೆ. ಅವರಿಂದ 196 ಗ್ರಾಂ ಚಿನ್ನಾಭರಣ ಮತ್ತು ಐದು ತುಂಡುಗಳಾಗಿ ಕತ್ತರಿಸಿದ ಚಿನ್ನದ ಕಡ್ಡಿಗಳು ಮತ್ತು ಎರಡು ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.