ಮಂಜೇಶ್ವರ: ನಿತಿನ್ ಕುಮಾರ್ ತೆಂಕಕಾರಂದೂರು ಅವರು ರಚಿಸಿ ನಿರ್ದೇಶಿಸಿದ ಯಕ್ಷಕವಿ ಯೋಗೀಶ ರಾವ್ ಚಿಗುರುಪಾದೆ ಪದ್ಯ ರಚಿಸಿರುವ ನೂತನ ಯಕ್ಷಗಾನ ಪ್ರಸಂಗ “ಕುಲದೈವೋ ಬ್ರಹ್ಮ” ಪ್ರಸಂಗ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನ ಇತ್ತೀಚೆಗೆ ಮೂಡಬಿದ್ರೆಯ ಕನ್ನಡಭವನದಲ್ಲಿ ಜರಗಿತು.
ಪ್ರಸಂಗ ಸುಮಾರು ಹನ್ನೆರಡು ಗಂಟೆಗಳ ಕಾಲ ತುಂಬಿದ ಸಭಾಗೃಹದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಈ ಸಂದರ್ಭ ಗಡಿನಾಡಿನ ಯಕ್ಷಕವಿ ಯೋಗೀಶ ರಾವ್ ಚಿಗುರುಪಾದೆಯವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಿ ಗೌರವಿಸಲಾಯಿತು.