ಮಂಜೇಶ್ವರ: ಜಿವಿಎಚ್‍ಎಸ್‍ಎಸ್ ಕುಂಜತ್ತೂರು ಶಾಲೆಯ 1991-92ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳ ಸ್ನೇಹ ಕೂಟ ಹಾಗೂ ಗುರು ವಂದನಾ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಅಕ್ಷರ ಸಂತ ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಬಾಯಾರು ಗ್ರಾಮಾಧಿಕಾರಿ ಶಂಕರ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಕುಂಜತ್ತೂರು ಜಿವಿಎಚ್‍ಎಸ್‍ಎಸ್ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ. ಉದ್ಘಾಟಿಸಿದರು. ಕಲಿಸಿದ ಗುರುಗಳನ್ನು ಸಮ್ಮಾನಿಸಲಾಯಿತು.
ಶಾಲೆಯಲ್ಲಿ 2024 ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಫಾತಿಮಾತ್ ಅನಾ ಮತ್ತು ಶಮನಜ್ ಕೆ. ಅವರನ್ನು ಸ್ಮರಣಿಕೆ ಹಾಗೂ ನಗದನ್ನು ನೀಡಿ ಗೌರವಿಸಲಾಯಿತು. ಸ್ನೇಹ ಕೂಟದ ಸವಿನೆನಪಿಗಾಗಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಕೋಲ್ಡ್ ವಾಟರ್ ಫಿಲ್ಟರ್ ಮೆಶಿನ್‍ನ್ನು ಕೊಡುಗೆಯಾಗಿ ನೀಡಲಾಯಿತು. ಸ್ನೇಹ ಕೂಟದಲ್ಲಿ 75 ಮಂದಿ ಹಳೆ ವಿದ್ಯಾರ್ಥಿಗಳು ಹಾಗೂ 16 ಮಂದಿ ಶಿಕ್ಷಕರು ಭಾಗವಹಿಸಿದ್ದರು. ಮೋಹಿತ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಬಿ. ಸ್ವಾಗತಿಸಿ, ಮೊೈದೀನ್ ಕುಟ್ಟಿ ವಂದಿಸಿದರು.
ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ದಿವಾಕರ್ ಶೆಟ್ಟಿ, ಲವೀನಾ ಕೆ., ಉಸ್ಮಾನ್ ಖಾದರ್, ಬಷೀರ್ ಉದ್ಯಾವರ, ಇಬ್ರಾಹಿಂ ಎಸ್, ಹಕೀಮ್, ಸಾದತ್, ಸುಜಿತ್ ಬಿ.ಎಂ, ಮುನೀರ್ ಎಂ.ಕೆ., ಅಬ್ದುಲ್ ಖಾದರ್, ಶ್ರೀಧರ ಪಟ್ನಾ, ಮಜೀದ್, ಜೈನಾಬಿ ಮೊದಲಾದವರು ಉಪಸ್ಥಿತರಿದ್ದರು. ಅರಬ್ ರಾಷ್ಟ್ರಗಳಿಂದ, ಬೆಂಗಳೂರು, ಕಲ್ಕತ್ತ ಹಾಗೂ ಇತರ ದೂರದ ಊರುಗಳಿಂದ ಹಲವಾರು ಹಳೆ ವಿದ್ಯಾರ್ಥಿಗಳು ಆಗಮಿಸಿದ್ದರು. ಬೆಳಿಗ್ಗೆ ಆರಂಭವಾದ ಕಾರ್ಯಕ್ರಮವು ಮದ್ಯಾಹ್ನದ ಭೋಜನ ಹಾಗೂ ಇನ್ನಿತರ ಮನೋರಂಜನ ಕ್ರೀಡಾ ಕೂಟಗಳೊಂದಿಗೆ ಸಂಜೆ ಸಮಾಪನವಾಯಿತು.