ತಿರುವನಂತಪುರಂ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಸ್‍ಆರ್‍ಟಿಸಿ. ನೌಕರರು ಕನಿಷ್ಠ ಐದು ದಿನಗಳ ವೇತನ ನೀಡಲು ಆದೇಶ ನೀಡಿದ ಆರೋಪದ ಬೆನ್ನಲ್ಲೇ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
ಘಟನೆಯಲ್ಲಿ ಆಡಳಿತ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಶರಫ್ ಮುಹಮ್ಮದ್ ಅವರನ್ನು ಆಡಳಿತ ವಿಭಾಗದಿಂದ ವರ್ಗಾವಣೆ ಮಾಡಲಾಗಿದೆ. ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಪಿ. ಪ್ರದೀಪ್ ಕುಮಾರ್ ಅವರು ಆಡಳಿತ ವಿಭಾಗದ ಹೆಚ್ಚುವರಿ ಹೊಣೆ ನೀಡಲಾಗಿದೆ. .ಸಕಾಲಕ್ಕೆ ಸಂಬಳ ಲಭಿಸದೆ ಕೆಎಸ್‍ಆರ್‍ಟಿಸಿ ನೌಕರರು Àತತ್ತರಿಸಿದ್ದ ಬೆನ್ನಲ್ಲೇ ಅಪಕ್ವ ಪ್ರಕಟಣೆ ನೀಡಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ. . ನೌಕರರಿಗೆ ಕನಿಷ್ಠ ಐದು ದಿನಗಳ ವೇತನವನ್ನು ತಡೆಹಿಡಿಯುವ ನಿರ್ಧಾರ ಬಹಿರಂಗಗೊಂಡ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವೇತನ ನೀಡಿದ ತಕ್ಷಣ ಅದೇ ದಿನವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವೇತನ ನೀಡುವಂತೆ ಆದೇಶ ಹೊರಡಿಸಿರುವುದರಲ್ಲಿ ನಿಗೂಢತೆ ಇದೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಬಿ. ಗಣೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.