HEALTH TIPS

ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ನೇತೃತ್ವದಲ್ಲಿ ಓಣಂ ಆಚರಣೆ

             ಮಂಜೇಶ್ವರ: ಕೇರಳದ ಪ್ರದಾನ ನಾಡಹಬ್ಬವಾದ ಓಣಂ ಆಚರಣೆಯನ್ನು ಗುವೇದಪಡ್ಪು  ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. 

                ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಕೃಷ್ಣ ನಾಯ್ಕ ಮಾಸ್ತರ್ ಆನೆಕಲ್ಲು ಉದ್ಘಾಟಿಸಿ ಮಾತನಾಡಿ,"ಹಬ್ಬಗಳು ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಕಾರ್ಯಕ್ರಮದ ಅಂಗವಾಗಿ ಮಾಡುವ ಹೂ ರಂಗೋಲಿಯು ಎಲ್ಲರ ಒಗ್ಗೂಡುವಿಕೆಯ ಸಂಕೇತವಾಗಿದ್ದು ಎಲ್ಲಾ ಬಣ್ಣದ ಹೂಗಳು ಒಟ್ಟು ಸೇರಿದಾಗ ಒಂದು ಆಕರ್ಷಕವಾದ ರಂಗೋಲಿ ಮೂಡಿ ಬರುತ್ತದೆ. ಅದೇ ರೀತಿ ನಾವೆಲ್ಲರೂ ಒಟ್ಟಾಗಿ ಬಾಳಬೇಕು ಎಂದು ತಿಳಿಸಿದರು.


           ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೊಣಿಬೈಲು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಜಮೀಲ, ಸರಸ್ವತಿ ಕೊಣಿಬೈಲು, ರುಬೀನಾ ಟೀಚರ್, ಪುಷ್ಪಲತಾ,ಸವಿತಾ, ರುಕ್ಷಾನ, ದೀಕ್ಷಿತ ,ಲಾವಣ್ಯ,ಹರೀಶ್ ಮೊದಲಾದವರು ಉಪಸ್ಥಿತರಿದ್ದರು.


            ಕಾರ್ಯಕ್ರಮದ ಅಂಗವಾಗಿ ಹೂವಿನ ರಂಗೋಲಿ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಮಾಡಲಾಯಿತು.ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಗ್ರಂಥಪಾಲಕಿ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries