ಕೋಝಿಕ್ಕೋಡ್: ಶಿರೂರಿನಲ್ಲಿ ಭೂಕುಸಿತದಿಂದ ಪ್ರಾಣ ಕಳೆದುಕೊಂಡ ಅರ್ಜುನ್ ಮೃತದೇಹ ಊರಿಗೆ ತರಲಾಗಿದ್ದು, ಅಂತ್ಯಸಂಸ್ಕಾರ ನಡೆಸಲಾಯಿತು. ಅಂತಿಮ ವಿದಾಯ ಹೇಳಲು ಸಾವಿರಾರು ಜನರು ಆಗಮಿಸಿದ್ದರು.
ಮನೆಯಲ್ಲಿ ಸಾರ್ವಜನಿಕ ದರ್ಶನದ ನಂತರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾದವು. ಮನೆಯವರ ಅಪೇಕ್ಷೆಯಂತೆ ಮನೆ ಪರಿಸರದಲ್ಲೇ ಶವ ಸಂಸ್ಕಾರ ನಡೆಯಿತು.
ಡಿಎನ್‍ಎ ಪರೀಕ್ಷೆ ಬಳಿಕ ಮೃತದೇಹವನ್ನು ನಿನ್ನೆ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ನಿನ್ನೆ ಕರ್ನಾಟಕದಿಂದ ಕೋಝಿಕೋಡ್ ವರೆಗೆ ಹೊರಟ ಮೃತದೇಹ ಹಸ್ತಾಂತರದಲ್ಲಿ ಕಾರವಾರ ಪೆÇಲೀಸರೂ ಜೊತೆಗಿದ್ದರು. ರಾಜ್ಯ ಸರ್ಕಾರದ ಪರವಾಗಿ ಸಚಿವ ಎ.ಕೆ.ಶಶೀಂದ್ರನ್ ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಾರವಾರ ಶಾಸಕ ಸತೀಶ್ ಕೃಷ್ಣ ಸಾಲೆ, ಕರ್ನಾಟಕದ ಸ್ಥಳೀಯ ಮುಳುಗುಗಾರ ಈಶ್ವರ್ ಮಲ್ಪೆ ಮತ್ತಿತರರು ಜೊತೆಗಿದ್ದರು. ಲಾರಿಯ ಕ್ಯಾಬಿನ್‍ನಿಂದ ಪತ್ತೆಯಾದ ಅರ್ಜುನ್ ಅವರ ಪೋನ್, ವಾಲೆಟ್ ಮತ್ತು ವಾಚ್ ಅನ್ನು ಆಂಬ್ಯುಲೆನ್ಸ್ ಜೊತೆಗಿನ ಕಾರಲ್ಲಿ ತರಲಾಯಿತು.
ಕ್ಯಾಂಡಿಕಲ್ ಪ್ರೇಮನ್ ಮತ್ತು ಶೀಲಾ ದಂಪತಿಯ ಪುತ್ರ ಅರ್ಜುನ್ ಸ್ಥಳೀಯರ ಅಚ್ಚುಮೆಚ್ಚಿನವರಾಗಿದ್ದರು. ಚಿಕ್ಕವಯಸ್ಸಿನಲ್ಲೇ ಹಲವು ಕೆಲಸಗಳನ್ನು ಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದ ತಂದೆ, ತಾಯಿ, ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರನಿಗೆ ಆಸರೆಯಾಗಿದ್ದರು. ಪ್ರೌಢಶಾಲೆಯ ನಂತರ ಬಟ್ಟೆ ಅಂಗಡಿಯಲ್ಲಿ ಕೆಲಸ ನಿರ್ವಹಿಸಿದ್ದರು. ಆಗಾಗ ಚಿತ್ರಕಲೆ ಸೇರಿದಂತೆ ಇತರೆ ಕೆಲಸಗಳನ್ನು ಮಾಡುತ್ತಿದ್ದರು. ಸಾರ್ವಜನಿಕ ರಂಗದಲ್ಲೂ ಸಕ್ರಿಯರಾಗಿದ್ದರು. ಅವರೆಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅರ್ಜುನ್ ಪ್ರಾರ್ಥನೆ ಮತ್ತು ಪ್ರೀತಿಯಿಂದ ಇಹ ಲೋಕ ತ್ಯಜಿಸಿರುವರು.