ಮಂಜೇಶ್ವರ: ಅಡ್ಕ ಶ್ರೀ ನಾಗದೇವರು, ಶ್ರೀ ಮಲರಾಯ ಪರಿವಾರ ದೈವಸ್ಥಾನ, ಕುಲಾಲ ಬಂಗೇರ ಕುಟುಂಬ ನಾಗಮೂಲ ಸ್ಥಾನ ಅಡ್ಕ ಕುಂಜತ್ತೂರು ಕ್ಷೇತ್ರದಲ್ಲಿ ಮೃತ್ಯುಂಜಯ ಹೋಮ, ವಿಶೇಷ ನಾಗತಂಬಿಲ ಹಾಗೂ ಶ್ರೀ ದೈವಗಳಿಗೆ ಪರ್ವ ಸೇವೆ ಬಡಾಜೆ ಗೋಪಾಲಕೃಷ್ಣ ತಂತ್ರಿವರ್ಯರ ಪೌರೋಹಿತ್ಯದಲ್ಲಿ, ಸುಮಾರು ನಾಲ್ಕು ಸಾವಿರದಷ್ಟು ಸದಸ್ಯರ ಸೇರಿಕೆಯಲ್ಲಿ ಯಜಮಾನರಾದ ಸೀತಾರಾಮ ಬಂಗೇರ ಹಾಗೂ ಅಧ್ಯಕ್ಷ ರಾಮಪ್ರಸಾದರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು. ಬೆಳಗ್ಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ತಂತ್ರಿವರ್ಯರನ್ನು ಬರಮಾಡಿಕೊಳ್ಳಲಾಯಿತು. ಧಾರ್ಮಿಕ ಮುಖಂಡ ಶ್ರೀಕೃಷ್ಣ ಶಿವಕೃಪಾ ಉಪಸ್ಥಿತರಿದ್ದರು. ತಂತ್ರಿವರ್ಯರನ್ನು ಹಿರಿಯರು ಸಮ್ಮಾಸಿದರು. ಉದ್ಯಾವರ ಮಾಡ ಅರಸು ದೈವದ ಅಣ್ಣಪಾತ್ರಿ ರಾಜ ಬೆಳ್ಚಪ್ಪಾಡ ಹಾಗೂ ತಮ್ಮ ಪಾತ್ರಿ ತಿಮಿರಿ ಬೆಳ್ಚಪ್ಪಾಡ ಕ್ಷೇತ್ರಕ್ಕೆ ಭೇಟಿಯಿತ್ತು ಶ್ರೇಯಸ್ಸಿಗಾಗಿ ಪ್ರಾರ್ಥಿಸಿದರು.
ಮಧ್ಯಾಹ್ನ ಅನ್ನಪ್ರಸಾದದ ನಂತರ ಸಭೆ ನಡೆಯಿತು. ಈ ಸಂದಧರ್Àದಲ್ಲಿ ಧಾರ್ಮಿಕ ಮುಖಂಡರಾದ ಶ್ರೀಕೃಷ್ಣ ಶಿವಕೃಪಾ ಅವರನ್ನು ಸಮ್ಮಾನಿಸಲಾಯಿತು. ಯಜಮಾನರಾದ ಸೀತಾರಾಮ ಬಂಗೇರ ಅವರು ಮಾತನಾಡಿ ಕಾರ್ಯಕ್ರಮದ ಯಶಸ್ಸಿನ ಖುಷಿಯನ್ನು ಹಂಚಿಕೊಂಡರು. ಆಡಳಿತ ಮಂಡಳಿ ಅಧ್ಯಕ್ಷ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿ ಕ್ಷೇತ್ರದ ಮುಂದಿನ ಅಭಿವೃದ್ಧಿಯ ಯೋಜನೆಯನ್ನು ಮುಂದಿಟ್ಟರು. ಜೊತೆ ಕಾರ್ಯದರ್ಶಿ ಮೋಹನ್ ದಾಸ್ ಶ್ರೀಮಾತಾ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚಂದಪ್ಪ ಅಡ್ಕ, ದಾಮೋದರ ಅಶೋಕನಗರ, ಕೋಶಾಧಿಕಾರಿ ಲೋಕೇಶ್ ಕುಂಪಲ, ಸೇವಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಅಡ್ಕ, ಹರೀಶ್ ಮೂಲ್ಯಣ್ಣ, ಸೀತಣ್ಣ ಅಡ್ಕ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಅಡ್ಯಾರ್ ಸ್ವಾಗತಿಸಿ, ಅಶೋಕ ಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.