ಸುರಿ : ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮಧ್ಯವಯಸ್ಕ ಮಹಿಳೆಯರು ವಾಮಾಚಾರ ಮಾಡುತ್ತಿದ್ದಾರೆ ಎಂದು ಶಂಕಿಸಿ ನೆರೆಹೊರೆಯವರು ಅವರನ್ನು ಥಳಿಸಿ ಹತ್ಯೆ ಮಾಡಿದ್ದಾರೆ.
ಸುರಿ : ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮಧ್ಯವಯಸ್ಕ ಮಹಿಳೆಯರು ವಾಮಾಚಾರ ಮಾಡುತ್ತಿದ್ದಾರೆ ಎಂದು ಶಂಕಿಸಿ ನೆರೆಹೊರೆಯವರು ಅವರನ್ನು ಥಳಿಸಿ ಹತ್ಯೆ ಮಾಡಿದ್ದಾರೆ.
ಬಿರ್ಭುಮ್ ಜಿಲ್ಲೆಯ ಮಯೂರೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದಂತೆ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಗಳಿಂದ ಅವರನ್ನು ಎಳೆದುಕೊಂಡು ಬಂದು ಮರಕ್ಕೆ ಕಟ್ಟಲಾಯಿತು. ನಂತರ ಕಟ್ಟಿಗೆ, ಕೋಲುಗಳಿಂದ ಥಳಿಸಿ ಹತ್ಯೆ ಮಾಡಲಾಯಿತು ಎಂದು ಅವರ ಸಂಬಂಧಿಗಳು ಹೇಳಿದ್ದಾರೆ.
ಇದು ವಾಮಚಾರಕ್ಕೆ ನಡೆದಿರುವ ಹತ್ಯೆ ಎಂದು ಕಾಣುತ್ತದೆ. ಆದರೆ ಇತರೆ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ನಂತರ ಅವರ ಕುಟುಂಬದವರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.