ಕಾಸರಗೋಡು: ಕೇರಳದಲ್ಲಿ ಅತಿಥಿ ಕಾರ್ಮಿಕರ ಮಕ್ಕಳ ಶಿಕ್ಷಣ ಕುರಿತಾದ ಪೆರಿಯದ ಕೇರಳ-ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರೊ.ಡಾ.ಎಂ.ಎನ್.ಮೊಹಮ್ಮದುಣ್ಣಿ ಯಾನೆ ಮುಸ್ತಫ ಹಾಗು ಡಾ.ಎ.ಶ್ರೀನ ಸಂಯುಕ್ತವಾಗಿ ರಚಿಸಿದ `ಫ್ರಂ ಫಾರ್ ಆ್ಯಂಡ್ ವೈಡ್ ಎಜುಕೇಶನಲ್ ಜರ್ನಿ ಆಫ್ ಮೈಗ್ರೆಂಟ್ಸ್ ಇನ್ ಕೇರಳ' ಎಂಬ ಪುಸ್ತಕವನ್ನು ವೈಸ್ ಚಾನ್ಸಲರ್ ಇನ್ ಚಾರ್ಜ್ ಪ್ರೊ..ವಿನ್ಸೆಂಟ್ ಮ್ಯಾಥ್ಯೂ ಬಿಡುಗಡೆಗೊಳಿಸಿದರು.