ಕಾಸರಗೋಡು: ಸಾಮಾಜಿಕ ಪೊಲೀಸ್ ವಿಭಾಗ ಕಾಸರಗೋಡು, ಜನಮೈತ್ರಿ ಪೊಲೀಸ್ ಠಾಣೆ ಹೊಸದುರ್ಗದ ನೇತೃತ್ವದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಸ್‍ಪಿಸಿ ಕೆಡೆಟ್‍ಗಳು ಅಂಬಲತ್ತರ ಸ್ನೇಹಾಲಯದ ಸದಸ್ಯರನ್ನು ಭೇಟಿ ಮಾಡಿ ಅವರಿಗೆ ಓಣಂ ಔತಣ ಬಡಿಸುವುದರ ಜತೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಪಿಟಿಎ ಅಧ್ಯಕ್ಷ ವಿ.ವಿ.ರಂಜಿರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎ.ವಿ.ಸುರೇಶ್ ಬಾಬು ಸಮಾರಂಭ ಉದ್ಘಾಟಿಸಿದರು. ಮುಖ್ಯಶಿಕ್ಷಕ ಎಂ.ಪಿ.ರಾಜೇಶ್ ಓಣಂ ಸಂದೇಶ ನೀಡಿದರು. ಎಸ್‍ಪಿಸಿ ಸಹಾಯಕ ನೋಡಲ್ ಅಧಿಕಾರಿ ತಂಬಾನ್ ಟಿ ಮುಖ್ಯ ಭಾಷಣ ಮಾಡಿದರು. ಜನಮೈತ್ರಿ ಸಹಾಯಕ ನೋಡಲ್ ಅಧಿಕಾರಿ ರಾಜೀವನ್ ಕೆಪಿವಿ, ಸಿಬ್ಬಂದಿ ಕಾರ್ಯದರ್ಶಿ ಪಿ. ಬಾಬುರಾಜ್, ಪೆÇಲೀಸ್ ಅಧಿಕಾರಿಗಳಾದ ಟಿ.ಟಿ.ವಿ. ಸಿಂಧು, ಟಿ.ವಹೀದತ್, ಕೆ.ರಾಗೇಶ್, ಟಿ.ಆರ್.ರಮ್ಯತಾ ಹಾಗೂ ಎಸ್‍ಪಿಸಿ ಪ್ರಭಾರಿ ಶಿಕ್ಷಕರು ಉಪಸ್ಥಿತರಿದ್ದರು.
ಜನಮೈತ್ರಿ ಬೀಟ್ ಅಧಿಕಾರಿ ಪ್ರದೀಪನ್ ಕೊತ್ತೋಳಿ ಸ್ವಾಗತಿಸಿದರು. ಸ್ನೇಹಾಲಯದ ನಿರ್ದೇಶಕ ಬ್ರದರ್ ಈಶೋದಾಸ್ ವಂದಿಸಿದರು. ಓಣಂ ಹಬ್ಬದ ಅಂಗವಾಗಿ ಔತಣಕೂಟದೊಂದಿಗೆ ಕಲಾ ಸಾಮಸ್ಕøಥಿಕ ಕಾರ್ಯಕ್ರಮ ನಡೆಸಿಕೊಟ್ಟ ಎಸ್‍ಪಿಸಿ ಕ್ಯಾಡೆಟ್‍ಗಳನ್ನು ಮತ್ತು ಸಹಕಾರ ನೀಡಿದವರನ್ನು ಬ್ರದರ್ ಈಶೋದಾಸ್ ಅಭಿನಂದಿಸಿದರು. ಕಾರ್ಯಕ್ರಮದ ಅಂಗವಾಗಿ ನಡೆದ ಗೀತ ಮೇಳಕ್ಕೆ ಪ್ರದೀಪ್ ತ್ರಿಕರಿಪುರ್ ಮತ್ತು ಮನು ಇಮ್ಯಾನುಯೆಲ್ ನೇತೃತ್ವ ನೀಡಿದರು.