ನವದೆಹಲಿ: ಸಿಪಿಐ ನಾಯಕ ಪ್ರಕಾಶ್ ಕಾರಟ್ ಅವರನ್ನು ಪಾಲಿಟ್ ಬ್ಯೂರೊ ಮತ್ತು ಕೇಂದ್ರ ಸಮಿತಿಯ ಹಂಗಾಮಿ ಸಂಯೋಜಕರಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷವು ಭಾನುವಾರ ತಿಳಿಸಿದೆ.
ನವದೆಹಲಿ: ಸಿಪಿಐ ನಾಯಕ ಪ್ರಕಾಶ್ ಕಾರಟ್ ಅವರನ್ನು ಪಾಲಿಟ್ ಬ್ಯೂರೊ ಮತ್ತು ಕೇಂದ್ರ ಸಮಿತಿಯ ಹಂಗಾಮಿ ಸಂಯೋಜಕರಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷವು ಭಾನುವಾರ ತಿಳಿಸಿದೆ.
2025ರ ಏಪ್ರಿಲ್‌ನಲ್ಲಿ ಪಕ್ಷದ 24ನೇ ಸಮ್ಮೇಳನ ನಡೆಯಲಿದೆ. ಅಲ್ಲಿಯವರೆಗೆ ಪ್ರಕಾಶ್ ಕಾರಟ್ ಅವರು ಸಂಯೋಜಕರಾಗಿರುತ್ತಾರೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀತಾರಾಮ್ ಯೆಚೂರಿ ಅವರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ಸೆ.13ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ನಿಧನರಾಗಿದ್ದರು. ಹಾಗಾಗಿ ಈ ಸ್ಥಾನ ತೆರವಾಗಿದೆ.
ನ್ಯುಮೋನಿಯಾ ಮಾದರಿಯ ಸೋಂಕಿನ ಕಾರಣಕ್ಕೆ ಅವರನ್ನು ಆಗಸ್ಟ್ 19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯೆಚೂರಿ ಅವರ ಇಚ್ಛೆಗೆ ಅನುಗುಣವಾಗಿ, ಅವರ ಮೃತದೇಹವನ್ನು ಏಮ್ಸ್‌ಗೆ ದಾನವಾಗಿ ನೀಡಲಾಗಿದೆ.