ಕಾಸರಗೋಡು: ಜಲ ಸಂರಕ್ಷಣೆ ಜಿಲ್ಲಾ ಮಟ್ಟದ ಅಭಿಯಾನವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಡಗ ಗ್ರಾಮ ಪಂಚಾಯತ್‍ನ ಕಾಂಞÂರತಿಂಗಾಲ್‍ನಲ್ಲಿ ಉದ್ಘಾಟಿಸಿದರು. ಬೇಡಗ ಪಂಚಾಯತ್ ಅಧ್ಯಕ್ಷೆ ಎಂ.ಧನ್ಯಾ ಅಧ್ಯಕ್ಷತೆ ವಹಿಸಿದರು. ನವ ಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಕೋರ್ಡಿನೇಟರ್ ಕೆ.ಬಾಲಕೃಷ್ಣನ್ ಯೋಜನೆಯ ಮಾಹಿತಿ ನೀಡಿದರು. ಕಾರಡ್ಕ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ರಮಣಿ, ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಟಿ.ವರದ ರಾಜ್, ಬಿಎಂಸಿ ಸಂಚಾಲಕ ಕೆ.ಬಾಲಕೃಷ್ಣನ್ ಮಾತನಾಡಿದರು. ಲತ್ವ ಗೋಪಿ ಸ್ವಾಗತಿಸಿದರು. ಹಸಿರು ಕೇರಳ ಮಿಷನ್ ರಿಸೋರ್ಸ್ ಪರ್ಸನ್ ಪಿ.ಕೆ.ಲೋಹಿತಾಕ್ಷನ್ ವಂದಿಸಿದರು. ಗ್ರಾಮ ಪಂಚಾಯತ್ ಸದಸ್ಯರು, ಕೃಷಿ ಕ್ರಿಯಾ ಸೇನೆ ಸದಸ್ಯರು, ಉದ್ಯೋಗ ಖಾತರಿ ಕೃಷಿಕರು ಮೊದಲಾದವರು ಭಾಗವಹಿಸಿದ್ದರು.