HEALTH TIPS

ಎಲ್‍ಡಿಎಫ್ ಸಭೆಯಲ್ಲಿ ಶಾಸಕ ಅನ್ವರ್ ಅವರ ಹಿಂದಿನ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ

ತಿರುವನಂತಪುರ: ಎಲ್ ಡಿಎಫ್ ಸಭೆಯಲ್ಲಿ ಶಾಸಕ ಪಿ.ವಿ.ಅನ್ವರ್ ಅವರ ಈ ಹಿಂದಿನ ರಾಜಕೀಯ ಚಿಂತನೆಯನ್ನು ಪ್ರಸ್ತಾವಿಸಿದ ಮುಖ್ಯಮಂತ್ರಿ ಯುಡಿಎಫ್‍ನಲ್ಲಿದ್ದ ಅನ್ವರ್ ಪ್ರತ್ಯೇಕ ರಾಜಕೀಯ ಸಂಸ್ಕøತಿಯಿಂದ ಬಂದವರು ಎಂದು ಪರೋಕ್ಷವಾಗಿ ಸೂಚಿಸಿದರು.

ಎಲ್‍ಡಿಎಫ್‍ನ ಶಿಸ್ತು ವ್ಯವಸ್ಥೆ ಅಲ್ಲಿಲ್ಲ. ಆದರೆ ನಾವು ಈಗ ಸೀಮಿತವಾಗಿದ್ದೇವೆ ಎಂದಿರುವರು.

ಮಾಧ್ಯಮಗಳು ಪ್ರಚಾರ ಮಾಡುತ್ತಿರುವಂತೆ ಎ.ಡಿ.ಜಿ.ಪಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ಆರ್.ಎಸ್.ಎಸ್.ನಾಯಕರನ್ನು ಭೇಟಿಯಾಗಿದ್ದಾರೆ ಎಂದುಕೊಳ್ಳುವವರು ನಮ್ಮ ನಡುವೆಯೇ ಇರುತ್ತಾರೆ. ಆದರೆ ಅದ್ಯಾವುದೂ ಲೆಕ್ಕಕ್ಕಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. 

ಮುಖ್ಯಮಂತ್ರಿಯ ನಿಲುವಿನ ಬಗೆಗೆ ತಮಗೆ ಅಂತಹ ಯಾವುದೇ ಆಲೋಚನೆ ಇಲ್ಲ, ಸಂಪೂರ್ಣ ನಂಬಿಕೆ ಇದೆ ಎಂದು ಬಿನೊಯ್ ವಿಶ್ವಂ ಉತ್ತರಿಸಿದರು.

ಎ.ಡಿ.ಜಿ.ಪಿ. ಎಂ.ಆರ್. ಅಜಿತ್ ಕುಮಾರ್ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್  ರಕ್ಷಿಸುವ ನಿಲುವು ತಳೆದಿದ್ದಾರೆ. ಆರ್.ಎಸ್.ಎಸ್ ಮುಖಂಡರನ್ನು ಭೇಟಿ ಮಾಡಿದ ಅಜಿತ್ ಕುಮಾರ್ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ಸಿಪಿಐ, ಆರ್ ಜೆಡಿ ಸೇರಿದಂತೆ ಘಟಕ ಪಕ್ಷಗಳು ಸಭೆಯಲ್ಲಿ ಪಟ್ಟು ಹಿಡಿದವು.

ಎಡ ಸರ್ಕಾರ ಅಧಿಕಾರದಲ್ಲಿದ್ದಾಗ ಆರ್‍ಎಸ್‍ಎಸ್‍ನ ಉನ್ನತ ಪೆÇಲೀಸ್ ಅಧಿಕಾರಿ ನಾಯಕರಿಗೆ ಸ್ಥಾನ ನೀಡಿರುವುದು  ರಾಜಕೀಯ ವಿಷಯವಾಗಿದೆ ಮತ್ತು ಕಡೆಗಣಿಸಬಾರದು ಎಂದು ಎರಡೂ ಪಕ್ಷಗಳು ಬಲವಾಗಿ ವಾದಿಸಿದವು. ತ್ರಿಶೂರ್ ಪೂರಂ ವೇಳೆ ನಡೆದ ಗಲಭೆಗೆ ಎಡಿಜಿಪಿಯೂ ಹೊಣೆ ಎಂದು ಎನ್‍ಸಿಪಿ ಹೇಳಿದೆ. ರಾಜ್ಯಾಧ್ಯಕ್ಷ ಪಿ.ಸಿ. ಚಾಕೋ ಈ ಬಗ್ಗೆ ಸೂಚಿಸಿದರು. ಆದರೆ, ನಡೆಯುತ್ತಿರುವ ತನಿಖೆಯಲ್ಲಿ ಈ ವಿಷಯವೂ ಸೇರಿರುತ್ತದೆ ಎಂದು ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ದೃಢವಾಗಿ ಹೇಳಿದರು. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಮುಖ್ಯಮಂತ್ರಿ ಹೇಳಿದರು.

ಸಭೆಯ ನಂತರ ಬಿನೊಯ್ ವಿಶ್ವ ಮತ್ತು ವರ್ಗೀಸ್ ಜಾರ್ಜ್ ಅವರು ಹಳೆಯ ನಿಲುವನ್ನು ಪುನರುಚ್ಚರಿಸಿದರು. ಬಿನೊಯ್ ಅವರು ಪ್ರತಿಕ್ರಿಯೆ ನೀಡಿ, ತಮ್ಮದು ಎಂದಿಗೂ ಒಂದೇ ಒಂದು ನಿಲುವು, ಇದರಿಂದ ಮುಂದೆ ಅಥವಾ ಹಿಂದೆ ಸರಿಯುವುದಿಲ್ಲ ಎಂದರು. ಸಭೆಗೂ ಮುನ್ನ ಸಿ.ಪಿ.ಎಂ. ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವ ವಿಶೇಷ ಸಭೆ ನಡೆಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries