ಬದಿಯಡ್ಕ: ರಸ್ತೆಯಲ್ಲಿ ಬಿದ್ದುಸಿಕ್ಕಿದ ಹಣತುಂಬಿದ ಪರ್ಸ್‍ನ್ನು ಅಧ್ಯಾಪಕರೋರ್ವರು ವಾರೀಸುದಾರರಿಗೆ ತಲುಪಿಸಿ ಮಾದರಿಯಾಗಿದ್ದಾರೆ.
ಬದಿಯಡ್ಕ ಪೇಟೆಯಲ್ಲಿ ಗಣೇಶಮೂರ್ತಿ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ನವಜೀವನ ಪ್ರೌಢಶಾಲೆಯ ಅಧ್ಯಾಪಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಅವರಿಗೆ ಜನಜಂಗುಳಿಯ ಮಧ್ಯೆ ಹಣತುಂಬಿದ್ದ ಪರ್ಸ್ ಬಿದ್ದುಸಿಕ್ಕಿತ್ತು. ಕೂಡಲೇ ಪರ್ಸ್‍ನ್ನು ಪಡೆದುಕೊಂಡು ಸೂಕ್ತ ಮಾಹಿತಿಗಳನ್ನು ಪಡೆದು ವಾರೀಸುದಾರರನ್ನು ಸಂಪರ್ಕಿಸಿದರು. ಬದಿಯಡ್ಕ ಪೊಲೀಸ್ ಇಲಾಖೆಯವರ ಸಮಕ್ಷಮದಲ್ಲಿ ವಾರೀಸುದಾರರಾದ ಬೀಜಂತಡ್ಕ ನಿವಾಸಿ ಸಲಾಂ ಅವರಿಗೆ ಪರ್ಸ್ ಹಸ್ತಾಂತರಿಸಿದರು. 21 ಸಾವಿರ ರೂಪಾಯಿ ನಗದು ಹಾಗೂ ಇತರ ದಾಖಲೆ ಪತ್ರಗಳು ಪರ್ಸ್‍ನಲ್ಲಿತ್ತು. ಮಾನವೀಯ ಕಾರ್ಯದ ಮೂಲಕ ಅಧ್ಯಾಪಕರು ತನ್ನ ವೃತ್ತಿಯ ಘನತೆಯನ್ನು ಎತ್ತಿಹಿಡಿದು ನಾಡಿಗೆ ಮಾದರಿಯಾಗಿದ್ದಾರೆ ಎಂದು ಸಲಾಂ ಬೀಜಂತಡ್ಕ ಕುಟುಂಬದವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.