ಕಾಸರಗೋಡು: ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಪ್ರದಿಕ್ ಜೈನ್ ಐಎಎಸ್ ಅಧಿಕಾರ ಸ್ವೀಕರಿಸಿದ್ದಾರೆ. ಎಂಪ್ಲೋಯಿಮೆಂಟ್ ಇಲಾಖೆ ನಿರ್ದೇಶಕರಾಗಿ ಬಡ್ತಿಗೊಂಡು ತೆರಳುತ್ತಿರುವ ಸೂಫಿಯಾನ್ ಅಹಮ್ಮದ್ ಅವರ ಜಾಗಕ್ಕೆ ಪ್ರದಿಕ್‍ಜೈನ್ ಅವರನ್ನು ನೇಂಇಸಲಾಗಿದೆ. ಉತ್ತರ ಪ್ರದೇಶದ ಲಲಿತ್‍ಪುರ ನಿವಾಸಿಯಾಗಿರುವ ಪ್ರದಿಕ್ ಜೈನ್ ಅವರು 2022ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ಕಾನ್ಪುರ ಐಐಟಿಯಿಂದ ಬಿ.ಟೆಕ್ ಪದವಿ ಪಡೆದಿರುವ ಇವರು ಕೋಯಿಕ್ಕೋಡಿನಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.