ಕುಂಬಳೆ: ಸೀತಾಂಗೋಳಿಯ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಓಣಂ ಹಬ್ಬದ ಆಚರಣೆ ರೋಯಲ್ ಹೆರಿಟೇಜ್ ರೆಸಾರ್ಟ್‍ನಲ್ಲಿ ಜರುಗಿತು. ಕೆಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿ.ಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾಷೆ, ಧರ್ಮವನ್ನು ಮೀರಿ, ಏಕತೆಯ ಸಂದೇಶ ಸಾರುವಲ್ಲಿ ಓಣಂ ಹಬ್ಬ ಮಹತ್ವದ ಪಾತ್ರ ವಹಿಸುಜತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಭವ್ಯ ಮೆರವಣಿಗೆಯನ್ನು ಅಹಮ್ಮದ್ ಹಾಜಿ ಉದ್ಘಾಟಿಸಿದರು. ಮಹಾಲಿಂಗ ಕೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕ್ಲಬ್ ಸದಸ್ಯರು ಹಾಗೂ ಅವರ ಕುಟುಂಬಸ್ಥರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. ಸ್ಪರ್ಧಾ ವಿಜೇತರಿಗೆ ಹಾಗೂ ಪ್ರತಿಭಾನ್ವಿತರಿಗೆ ಸ್ಮರಣಿಕೆ ನೀಡಲಾಯಿತು. ವಕೀಲ ಥಾಮಸ್ ಡಿ.ಸೋಜ ಅವರು ರಚಿಸಿದ ಸೀತಾಂಗೋಳಿಯ ಗತ ವೈಭವ ಪುಸ್ತಕದ ಮುಖಪುಟ ವಿನ್ಯಾಸಗೊಳಿಸಿದ ಉದಯ ಕಿಳಿಂಗಾರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವಕೀಲ ಥಾಮಸ್ ಡಿ.ಸೋಜ ಸ್ವಾಗತಿಸಿದರು. ಅಪ್ಪಣ್ಣ ವಂದಿಸಿದರು. ಈ ಸಂದರ್ಭ ವಿಶೇಷ ಓಣಂ ಔತಣ ಕೂಟ ಯೋಜಿಸಲಾಗಿತ್ತು.