ಬದಿಯಡ್ಕ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಎಡನೀರು ಸನಿಹ ಎದುರ್‍ತೋಡಿನಲ್ಲಿ ಪಲ್ಟಿಯಾಗಿದ್ದ ಅನಿಲ ಸಾಗಾಟದ ಟ್ಯಾಂಕರನ್ನು ಸುದೀರ್ಘ ಕಾರ್ಯಾಚರಣೆ ನಂತರ ಮಗುಚಿಬಿದ್ದ ಟ್ಯಂಕರನ್ನು ತೆರವುಗೊಳಿಸಲಾಯಿತು. ಬುಧವಾರ ಮಧ್ಯಾಹ್ನ ಎದುರ್ತೋಡಿನ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ವಾಹನ ಸಂಚಾರ ತಾಸುಗಳ ಕಾಲ ಸ್ಥಗಿತಗೊಂಡಿತ್ತು. ಮಂಗಳೂರಿನಿಂದ ಕೋಯಿಕ್ಕೋಡಿಗೆ ತೆರಳುತ್ತಿದ್ದ ಟ್ಯಾಂಕರ್ ರಸ್ತೆಗೆ ಅಡ್ಡ ಪಲ್ಟಿಯಾಗಿತ್ತು.