ಕೊಚ್ಚಿ: ಸಿನಿಮಾದಲ್ಲಿ ಅವಕಾಶ ಹಾಗೂ ತಾರಾ ಸಂಘಟನೆಯಾದ ಅಮ್ಮಾದಲ್ಲಿ ಸದಸ್ಯತ್ವ ನೀಡುವುದಾಗಿ ಭರವಸೆ ನೀಡಿ ತನ್ನ ಫ್ಲಾಟ್‍ಗೆ ಕರೆಸಿ ಕಿರುಕುಳ ನೀಡಿದ್ದಾರೆ ಎಂಬ ಆಲುವಾ ಮೂಲದ ನಟಿಯೊಬ್ಬರು ನೀಡಿದ ದೂರಿನ ಮೇರೆಗೆ ವಿಶೇಷ ತನಿಖಾ ತಂಡ ನಟ ಇಡವೇಳ ಬಾಬು ಅವರನ್ನು ವಿಚಾರಣೆ ಆರಂಭಿಸಿದೆ.
ಈ ಹಿಂದೆಯೇ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಆತನನ್ನು ಬಂಧಿಸಿ ವಿಚಾರಣೆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು..
ನಟಿಯ ಜೊತೆ ಅನುಚಿತವಾಗಿ ವರ್ತಿಸಿದ್ದು, ಜೂನಿಯರ್ ಆರ್ಟಿಸ್ಟ್ ಜೊತೆ ಅಶ್ಲೀಲವಾಗಿ ಮಾತನಾಡಿದ್ದು ಸೇರಿದಂತೆ ಬಾಬು ವಿರುದ್ಧ ಎರಡು ದೂರುಗಳಿವೆ. ಟಿ ದೂರಿನ ಮೇರೆಗೆ ಎರ್ನಾಕುಳಂ ಉತ್ತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂನಿಯರ್ ಆರ್ಟಿಸ್ಟ್ ನೀಡಿದ ದೂರಿನ ಮೇರೆಗೆ ಕೋಝಿಕ್ಕೋಡ್ ನಡಕಾವ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಈ ಹಿಂದೆ ಇಡವೇಳ ಬಾಬು ಅವರ ಫ್ಲಾಟ್‍ನಲ್ಲಿ ಪೋಲೀಸರು ಶೋಧ ನಡೆಸಿದ್ದರು. ಇಲ್ಲಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ತನಿಖಾ ತಂಡದಿಂದ ಬಂದಿರುವ ಮಾಹಿತಿ. ದೂರುದಾರರನ್ನು ಫ್ಲಾಟ್‍ಗೆ ಕರೆತಂದು ಸಾಕ್ಷ್ಯ ತೆಗೆದುಕೊಳ್ಳಲಾಗಿದೆ. ಇದೇ ಪ್ರಕರಣದಲ್ಲಿ ನಟ ಹಾಗೂ ಶಾಸಕ ಮುಖೇಶ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.
ಇದೇ ವೇಳೆ ವಿಶೇಷ ತನಿಖಾ ತಂಡ ಹೇಮಾ ಸಮಿತಿ ವರದಿಯ ತನಿಖೆಯನ್ನು ವಿಸ್ತರಿಸಿದೆ. ಅಮ್ಮಾ ಸಂಘಟನೆಯ ಮಾಜಿ ಪದಾಧಿಕಾರಿಗಳ ಹೇಳಿಕೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.