ಬದಿಯಡ್ಕ: ಭೂಕುಸಿತದಿಂದ ನಲುಗಿ ಹೋಗಿರುವ ವಯನಾಡು ದುರಂತ ಪರಿಹಾರ ನಿಧಿಗೆ ಮವ್ವಾರು ಎಯುಪಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಹಾಯವನ್ನು ನೀಡಿ ಹೃದಯವಂತಿಕೆ ಮೆರೆದಿದ್ದಾರೆ.
ಮಕ್ಕಳು ತಮ್ಮ ಮನೆಯಿಂದ ಸಂಗ್ರಹಿಸಿದ ಕೃಷಿ ವಸ್ತುಗಳನ್ನು ಮಾರಾಟ ಮಾಡಿ ಉಳಿತಾಯದ ಹಣವನ್ನು ನೀಡಿದ್ದ್ತಾರೆ.ಮುಖ್ಯೋಪಾಧ್ಯಾಯಿನಿ ಶೀಜಾ ಪಿ.ವಿ ಅವರ ನೇತೃತ್ವದಲ್ಲಿ ಮಕ್ಕಳಿಂದ ಸಂಗ್ರಹಿಸಿದ ಸುಮಾರು ಹತ್ತು ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎಡಿಎಂ ಅವರ ಮೂಲಕ ಹಸ್ತಾಂತರಿಸಲಾಯಿತು. ಶಾಲೆಯ ಪ್ರಮುಖರಾದ ಕಾಶಿನಾಥನ್, ಪ್ರಣಮ್ಯ ಪಿಟಿಎ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು, ರಾಜೇಶ್ ಎಂ. ಜೊತೆಗಿದ್ದರು.