ಕಾಸರಗೋಡು: ರೋಟರಿ ಕ್ಲಬ್ ಕಾಸರಗೋಡು ಐಎಪಿ ಮತ್ತು ಐಎಂಎ ಸಹಯೋಗದಲ್ಲಿ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಬಿಎಲ್‍ಎಸ್ ತರಗತಿಯನ್ನು ಕಾಸರಗೋಡು ಸÀರ್ಕಾರಿ ಕಾಲೇಜಿನಲ್ಲಿ ಎನ್‍ಸಿಸಿ ಶಿಬಿರದಲ್ಲಿ ನಡೆಸಲಾಯಿತು.
ಶಿಬಿರದಲ್ಲಿ ಒಟ್ಟು 450 ಕೆಡೆಟ್‍ಗಳು ಭಾಗವಹಿಸಿದರು. ರೋಟೀರಿಯನ್ ಡಾ.ಬಿ.ನಾರಾಯಣ ನಾಯ್ಕ್ ತರಬೇತುದಾರರಾಗಿ ತರಗತಿ ನಡೆಸಿದರು. ಛಾಯಾಗ್ರಾಹಕ ಶ್ರೀಕಾಂತ್, ಜೆ.ಎಚ್.ಐ ಶ್ರೀಜಿತ್, ಅಖಿಲ್ ಬ್ರದರ್ ಜಿ.ಎಚ್.ಕಾಸರಗೋಡು, ನರ್ಸಿಂಗ್ ಸಹಾಯಕಿ ಶೀಬಾ, ಕರ್ನಲ್ ಸಜೀಂದ್ರನ್, ಪಯ್ಯನ್ನೂರ್ ಲೆಫ್ಟಿನೆಂಟ್ ಕರ್ನಲ್ ಅನುರಾಜ್ ಟಿ.ವಿ, ನಂದಕುಮಾರ್ ಕೋರೋತ್, ಅಸೋಸಿಯೇಟ್ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ದೀಪಾ ಮೋಹನ್, ಸಹಾಯಕ ಎನ್‍ಸಿಸಿ ಅಧಿಕಾರಿ ಉಪ ಮೇಜರ್ ಡಿ.ವಿ.ಎಸ್.ರಾವ್ ಭಾಗವಹಿಸಿದ್ದರು. ಶಿಬಿರಾರ್ಥಿಗಳಿಗೆ ಬಿಎಲ್‍ಎಸ್, ಏರ್ ವೇ ನಿರ್ವಹಣೆ, ವಿದೇಶಿ ದೇಹ ತೆಗೆಯುವಿಕೆ(ಫಾರಿನ್ ಬೊಡಿ ರಿಮೂವಲ್), ಹೈಮ್ಲಿಚ್ ಕುಶಲತೆ, ಮಗು ಮತ್ತು ವಯಸ್ಕ ಸಿಪಿಆರ್‍ನಲ್ಲಿ ತರಬೇತಿ ನೀಡಲಾಯಿತು.