ತಿರುವನಂತಪುರಂ: ತ್ರಿಶೂರ್ ಪೂರಂ ಗೊಂದಲಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಜಿತ್ ಕುಮಾರ್ ನೇತೃತ್ವದ ತನಿಖೆಯ ವರದಿ ಸಲ್ಲಿಕೆಯಾಗಿದೆ. ಐದು ತಿಂಗಳ ತನಿಖೆಯ ನಂತರ ವರದಿ ಸಲ್ಲಿಸಲಾಗಿದೆ.
ವಾರದೊಳಗೆ ವಿಚಾರಣೆ ವರದಿ ಸಲ್ಲಿಸುವಂತೆ ಆರಂಭಿಕ ಸೂಚನೆ ನೀಡಲಾಗಿತ್ತು. ಆದರೆ ಇದೀಗ ಹಲವು ವಿವಾದಗಳ ಬಳಿಕ ತನಿಖಾ ವರದಿ ಸಲ್ಲಿಕೆಯಾಗಿದೆ.
600 ಪುಟಗಳ ವರದಿಯನ್ನು ಮೆಸೆಂಜರ್ ಮೂಲಕ ಮುಚ್ಚಿದ ಲಕೋಟೆಯಲ್ಲಿ ಶನಿವಾರ ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ. ಆದರೆ ಡಿಜಿಪಿ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಪರಿಶೀಲಿಸಲಿದ್ದಾರೆ ಎಂದು ತಿಳಿದುಬಂದಿದೆ.