ಮಂಜೇಶ್ವರ: ಶ್ರೀಮತ್ ಅನಂತೇಶ್ವರ ದೇವಳದ ಶಾಲೆಗಳ ಶತಮಾನೋತ್ಸವದ ಪ್ರಯುಕ್ತ ಶಾಲಾ ಲಿಟಲ್ ಕೈಟ್ ಹಾಗೂ ಟೀಂ ಶಾಸ್ತ್ರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಮಾಹಿತಿ ತಂತ್ರಜ್ಞಾನ ಆಧಾರಿತ ಕಾರ್ಯಗಾರದ ಸಮಾರೋಪ ಕಾರ್ಯಕ್ರಮವು ಎಸ್.ಎ.ಟಿ. ಶಾಲೆಯಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಕರೆಸ್ಪಾಂಡೆಂಟ್ ನಿತಿನ್ ಚಂದ್ರ ಪೈ ವಹಿಸಿದ್ದರು. ಕಾರ್ಯಾಗಾರವನ್ನು ನಡೆಸಿಕೊಟ್ಟ ಮಂಗಳೂರಿನ ಕೆನರಾ ಹಾಗೂ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಟೀಮ್ ಶಾಸ್ತ್ರದ ಸದಸ್ಯರನ್ನು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಲಿಟಿಲ್ ಕೈಟ್ ವಿದ್ಯಾರ್ಥಿಗಳು ಕಾರ್ಯಗಾರದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪ್ರೌಢಶಾಲಾ ಶಿಕ್ಷಕ ಪೂರ್ಣಯ್ಯ ಪುರಾಣಿಕ್, ಶಾಂತೇರಿ ಶೆಣೈ, ಐಟಿ ಕಾರ್ಡಿನೇಟರ್ ಕಿರಣ್ ಕುಮಾರ್, ಸುಷ್ಮಾ, ಲಕ್ಷ್ಮಿದಾಸ್ ಪ್ರಭು ಉಪಸ್ಥಿತರಿದ್ದರು.
ಎಸ್.ಎ.ಟಿ. ವಿದ್ಯಾಸಂಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಕಾರ್ಯಾಗಾರದ ಸಮಾರೋಪ