ತಿರುವನಂತಪುರಂ: ಸಹಕಾರಿ ಬ್ಯಾಂಕ್‍ನಲ್ಲಿ 18 ಸ್ಥಿರ ಠೇವಣಿಗಳನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ವೃದ್ಧರ ದೂರಿನ ಮೇರೆಗೆ ಲೋಕಾಯುಕ್ತರು ಮಧ್ಯ ಪ್ರವೇಶಿಸಿ ಒಂದು ತಿಂಗಳೊಳಗೆ ಹಣ ಪಾವತಿಸುವಂತೆ ಬ್ಯಾಂಕ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಸೂಚಿಸಿರುವರು.
ಎಂಬತ್ತು ವರ್ಷದ ಪದ್ಮಾವತಿ ಅಮ್ಮ, ರಾಸಲ್‍ಪುರಂ ಮೂಲದ ಉರುತಂಬಲಂ ಸಹಕಾರಿ ಬ್ಯಾಂಕ್ ವಿರುದ್ಧ ದೂರು ದಾಖಲಿಸಿದ್ದರು.
ಈ ವೇಳೆ ದೂರುದಾರರಿಗೆ ಒಂದು ತಿಂಗಳೊಳಗೆ 18 ಸ್ಥಿರ ಠೇವಣಿಗಳನ್ನು ಹಿಂದಿರುಗಿಸುವಂತೆ ಆದೇಶಿಸಲಾಗಿದೆ. ಪ್ರಕರಣವನ್ನು ಕಡತದಲ್ಲಿ ಸ್ವೀಕರಿಸಲಾಗಿದೆ ಮತ್ತು ಪ್ರತಿಕಕ್ಷಿಗಳಿಗೆ ನೋಟಿಸ್ ಕಳುಹಿಸಲಾಗಿದೆ. ಅಕ್ಟೋಬರ್ 10 ರಂದು ಲೋಕಾಯುಕ್ತರ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.