ಕಾಸರಗೋಡು: ಬೇಡಡ್ಕದ ಚೆರಿಪ್ಪಾಡಿ ನಿವಾಸಿ, ರಾಷ್ಟ್ರೀಯ ಕಬಡ್ಡಿ ತಾರೆ ಪ್ರೀತಿ(27)ಎಂಬವರ ಆತ್ಮಹತ್ಯೆ ಪ್ರಕರಣದ ಅಪರಾಧಿಗಳಾದ ಈಕೆಯ ಪತಿ ಹಾಗೂ ಅತ್ತೆಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶ ವಿ. ಮನೋಜ್ ಅವರು ಕಠಿಣ ಜೈಲು ಶಿಕಷೆ ಮತ್ತು ದಂಡ ವಿಧಿಸಿ ತೀರ್ಪಿತ್ತಿದ್ದಾರೆ.
ಪ್ರೀತಿ ಅವರ ಪತಿ ವೆಸ್ಟ್‍ಎಳೇರಿ ಮಾಙËಡ್ ಪೊರವಂಕರೆ ನಿವಾಸಿ ರಾಜೇಶ್‍ಕೃಷ್ಣನ್(38)ಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ, ಈತನ ತಾಯಿ, ಪ್ರೀತಿ ಅವರ ಸೊಸೆ ಶ್ರೀಲತಾಳಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಇಬ್ಬರೂ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ. ದಂಡದ ಮೊತ್ತವನ್ನು ಮೃತ ಪಟ್ಟಿರುವ ಪ್ರೀತಿ ಅವರ ಪುತ್ರಿಗೆ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ.
2017 ಆಗಸ್ಟ್18ರಂದು ಪ್ರೀತಿ ಅವರ ಮೃತದೇಹ ಚೆರಿಪ್ಪಾಡಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರೀತಿ ಆತ್ಮಹತ್ಯೆಗೆ ಪತಿ ಹಾಗೂ ಆತನ ತಾಯಿಯ ಪ್ರಚೋದನೆ ಕಾರಣವೆಂದು ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅಂದಿನ ಡಿವೈಎಸ್ಪಿ ಎಂ.ವಿ ಸುಕುಮಾರನ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.