ಪೆರ್ಲ: ಪೆರ್ಲದ ನಾಲಂದ ಕಾಲೇಜು, ನಾಲಂದ ಚಾರಿಟೇಬಲ್ ಟ್ರಸ್ಟ್ ಹಾಗೂ ವಾಣಿಜ್ಯೋದ್ಯಮ ಅಭಿವೃದ್ದಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಉದ್ಯಮಶೀಲತೆ ಅಬಿವೃದ್ದಿ ದೃಷ್ಟಿಕೋನ ತರಗತಿ ಕಾರ್ಯಕ್ರಮ ಮಂಗಳವಾರ ನಡೆಯಿತು. ಪ್ರಾಂಶುಪಾಲ, ವಾಣಿಜ್ಯೋದ್ಯಮ ಅಬಿವೃದ್ದಿ ಕ್ಲಬ್ ಪೋಷಕ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ಉದ್ಯಮಿ ಸಫಲನಾಗಲು ತನ್ನ ಕೌಶಲ್ಯವನ್ನು ಬಲಪಡಿಸಬೇಕು. ದೇಶದ ಏಳಿಗೆಗೆ ಆಳಾಗಿ ದುಡಿಯುವ ಬದಲು ಹಲವು ಜನರಿಗೆ ಕೆಲಸ ನೀಡುವ ವ್ಯಕ್ತಿಯಾಗಬೇಕು. ಎಲ್ಲರಲ್ಲೂ ಈ ಮನೋಭಾವ ಬೆಳೆದಾಗ ದೇಶ ಅಭಿವೃದ್ಧಿ ಹೊಂದುವುದು ಎಂದರು.
ವಾಣಿಜ್ಯೋದ್ಯಮ ಅಭಿವೃದ್ದಿ ಕ್ಲಬ್ ಸಂಯೋಜಕಿ ಭವ್ಯ ಬಿ. ಉದ್ಯಮಶೀಲತೆಯ ಪ್ರಾಮುಖ್ಯತೆ ಹಾಗೂ ಮಹತ್ವದ ಕುರಿತು ತರಗತಿ ನೀಡಿದರು. ಕಾರ್ಯಕ್ರಮ ಸಂಯೋಜಕಿ ಭವ್ಯ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ಆದರ್ಶ್ ವಂದಿಸಿದರು. ಹರ್ಷಿತಾ ನಿರೂಪಿಸಿದರು.