ಮಲಪ್ಪುರಂ: ಪಿ.ವಿ.ಅನ್ವರ್ ವಿರುದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾಡಿರುವ ಆರೋಪವನ್ನು ನಿರಾಕರಿಸಿದ ನಂತರ, ಅನ್ವರ್ ಅವರನ್ನು ಮುಸ್ಲಿಂ ಲೀಗ್ ಪಕ್ಷಕ್ಕೆ ಆಹ್ವಾನಿಸಿದೆ.
ಮುಸ್ಲಿಂ ಲೀಗ್ ನಿಲಂಬೂರು ಕ್ಷೇತ್ರದ ಅಧ್ಯಕ್ಷ ಇಕ್ಬಾಲ್ ಮುಂಡೇರಿ ಅನ್ವರ್ ಅವರನ್ನು ಫೇಸ್ ಬುಕ್ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.
ಅನ್ವರ್ ಹೇಳುವ ಹಲವು ಸಂಗತಿಗಳು ಸತ್ಯವಾಗಿವೆ. ಸ್ವಾತಂತ್ರ್ಯ ಹೋರಾಟಗಾರ ಶೌಕತ್ ಅಲಿ ಸಾಹೇಬರ ಪುತ್ರರಾಗಿರುವ ಪಿ.ವಿ.ಅನ್ವರ್ ಅವರ ನೈಜ ಇತಿಹಾಸ ಪಿಣರಾಯಿ ವಿಜಯನ್ ರಿಗೆ ಅರಿವಿಲ್ಲ. ಅನ್ವರ್ ಅವರ ಮನೆತನದ ಇತಿಹಾಸವನ್ನೊಮ್ಮೆ ನೋಡಬೇಕು ಎಂದು ಅವರು ಟಿಪ್ಪಣಿಯಲ್ಲಿ ಹೇಳಿದ್ದಾರೆ. ಪಿ.ವಿ. ಅನ್ವರ್ ಅವರ ಸತ್ಯಗಳನ್ನು ಪಿಣರಾಯಿ ವಿಜಯನ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಅನ್ವರ್ ಯಾರಿಗೂ ಮಣಿಯುವ ಸಹಜ ವ್ಯಕ್ತಿ ಅಲ್ಲ ಎಂದು ಇಕ್ಬಾಲ್ ಮುಂಡೇರಿ ಫೇಸ್ ಬುಕ್ ಪೋಸ್ಟ್ ಮೂಲಕ ಹೇಳಿದ್ದಾರೆ.
ಆದರೆ ಪೋಸ್ಟ್ ವಿವಾದಕ್ಕೀಡಾದ ನಂತರ ಇಕ್ಬಾಲ್ ಫೇಸ್‍ಬುಕ್ ಪೋಸ್ಟ್ ಅನ್ನು ತೆಗೆದುಹಾಕಿದ್ದಾರೆ. ಅವರ ನಿಲುವಿನ ಬಗ್ಗೆ ತಮಗೆ ತಿಳಿದಿಲ್ಲ ಎಂದು ಲೀಗ್ ನಾಯಕ ಪಿ.ಕೆ. ಕುನ್ಹಾಲಿಕುಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.