ಡ್ರೋನ್ ದೃಶ್ಯಗಳಲ್ಲಿ ಭಯೋತ್ಪಾದಕನೊಬ್ಬ ಮನೆಯಿಂದ ಹೊರಬಂದು ಓಡಿ ಹೋಗಲು ಯತ್ನಿಸುತ್ತಿದ್ದನು. ಈ ವೇಳೆ ಭಾರತೀಯ ಸೇನೆಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ದಾಳಿಯ ನಡುವೆ, ಉಗ್ರ ನೆಲದ ಮೇಲೆ ಬಿದ್ದು ಕೆಲವು ಮೀಟರ್‌ಗಳವರೆಗೆ ನೆಲದ ಮೇಲೆ ತೆವಳುತ್ತಾ ಹೋಗೆ ಗಿಡಗಳ ಕೆಳಗೆ ಅವಿತು ಕುಳಿತುಕೊಳ್ಳುತ್ತಾನೆ. ಆದರೆ ಸೇನಾ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.
ಭಯೋತ್ಪಾದಕರ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದ ನಂತರ, ಭದ್ರತಾ ಪಡೆಗಳು ಶುಕ್ರವಾರ ತಡರಾತ್ರಿ ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದ ಚಕ್ ತಪ್ಪರ್ ಕ್ರಿರಿಯಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು ಎಂದು ರಾಷ್ಟ್ರೀಯ ರೈಫಲ್ಸ್ ಕಮಾಂಡರ್ ಬ್ರಿಗೇಡಿಯರ್ ಸಂಜಯ್ ಕನ್ನೋತ್ ಹೇಳಿದ್ದಾರೆ. ಖಾಲಿ ಕಟ್ಟಡದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬ್ರಿಗೇಡಿಯರ್ ಕಣ್ಣೋತ್ ತಿಳಿಸಿದ್ದಾರೆ.
ನಾವು ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದೇವೆ. ಮೊದಲಿಗೆ ಸ್ಥಳವನ್ನು ಸುತ್ತುವರಿಯಲಾಯಿತು. ನಂತರ ಹೆಚ್ಚುವರಿ ಪಡೆಗಳನ್ನು ಅಲ್ಲಿಗೆ ಕರೆಸಿಕೊಳ್ಳಲಾಯಿತು. ರಾತ್ರಿಯಿಡೀ ಯೋಧರ ಮೇಲೆ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದು, ಅದಕ್ಕೆ ತಕ್ಕ ಉತ್ತರ ನೀಡಲಾಯಿತು. ಇದಕ್ಕೂ ಮೊದಲು ಕುಪ್ವಾರದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ಸೇನಾ ಯೋಧರು ಹುತಾತ್ಮರಾಗಿದ್ದರು. ಸುಮಾರು ಹತ್ತು ವರ್ಷಗಳ ನಂತರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜಮ್ಮು-ಕಾಶ್ಮೀರದಲ್ಲಿ ಪ್ರಚಾರ ನಡೆಯುತ್ತಿದೆ.