ಹಮೀರ್ಪುರ: ಸರ್ಕಾರಿ ಶಾಲೆಯ ಆವರಣದಲ್ಲಿ ಮಗನ ಮದುವೆ ಆಯೋಜಿಸಿದ್ದಕ್ಕಾಗಿ ನಾಲ್ಕು ವಾರಗಳ ಒಳಗಾಗಿ ಶಾಲೆಯಲ್ಲಿ ಎರಡು ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವಂತೆ ಶಿಕ್ಷಕಿಯೊಬ್ಬರಿಗೆ ಹಿಮಾಚಲ ಪ್ರದೇಶ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.

ಸುಲ್ಗನ್ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ 2021ರ ನವೆಂಬರ್ 5ರಂದು ಮದುವೆ ನೆರವೇರಿತ್ತು.
ಶಿಕ್ಷಣ ಇಲಾಖೆ ಅಧಿಕಾರಿಗಳು ನವೆಂಬರ್ 8ರಂದು ತಪಾಸಣೆಗಾಗಿ ಬಂದಾಗಲೂ ಮದುವೆ ನಡೆದಿರುವುದು ದೃಢಪಟ್ಟಿತ್ತು. ಆದರೆ, ಯಾರ ಮೇಲೆಯೂ ಕ್ರಮ ಕೈಗೊಂಡಿರಲಿಲ್ಲ. ಸಹಾಯವಾಣಿಯಿಂದಲೂ ಸರಿಯಾದ ಉತ್ತರ ದೊರೆಯಲಿಲ್ಲ. ಆದ್ದರಿಂದ, ಶಶಿಕಾಂತ್ ಅವರು ಮದುವೆ ನಡೆಸಿರುವ ಕುರಿತು ಆರ್‌ಟಿಐ ಮೂಲಕ ಮಾಹಿತಿ ಪಡೆದು, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಅಜಯ್ ಮೋಹನ್ ಗೋಯಲ್ ಸೋಮವಾರ ವಿಚಾರಣೆ ನಡೆಸಿದರು. ಶಾಲೆಯ ಮುಖ್ಯೋಪಾಧ್ಯಾಯರು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದರು. ಆದರೆ, ಈಗ ಅವರು ನಿವೃತ್ತರಾಗಿದ್ದು, ಮನೆಯ ವಿಳಾಸವನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದರು.