ಉಪ್ಪಳ: ಪೈವಳಿಕೆಯ ಲಾಲ್ ಭಾಗ್ ನ ಸುಭಾಷ್ ಫ್ರೆಂಡ್ಸ್ ಸರ್ಕಲ್ ಇದರ 55ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗ ಕಲಾವಿದ ಅರವಿಂದ ಬೋಳಾರ್ ಇವರ ಒಂದು ಮೀಟರ್ ಚೌಕ ಆಕಾರದಲ್ಲಿ ರಚಿಸಿದ ತ್ರೆಡ್ ಆರ್ಟ್(ನೂಲಿಂದ ರಚಿಸಿದ ಚಿತ್ರ) ನ್ನು ಬೋಳಾರ್ ಅವರಿಗೆ ಹಸ್ತಾಂತರಿಸಲಾಯಿತು.
ಇದರಲ್ಲಿ 270 ಮೊಳೆ 4000 ಕಪ್ಪು ನೂಲನ್ನು ಬಳಸಿ ಅರವಿಂದ ಬೋಳಾರ್ ಭಾವಚಿತ್ರವನ್ನು ಮಾಡಿದ ಭವಿನ್ ಡಿ ಎಸ್ ಸರ್ಕುತ್ತಿ ಇವರಿಗೆ ಸುಭಾಷ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸನ್ಮಾನಿಸಲಾಯಿತು.