HEALTH TIPS

ವಿಡಿಯೊ ನೋಡಿ: ಪ್ರಯಾಣಿಕರ ರೈಲಿನ ಎ.ಸಿ ಕೋಚ್‌ನಲ್ಲಿ ಬುಸುಗುಟ್ಟಿದ ಹಾವು!

 ಬಲ್ಪುರ್: ಹಾವೊಂದು ಎಕ್ಸ್‌ಪ್ರೆಸ್ ರೈಲಿನ ಎ.ಸಿ ಕೋಚ್‌ನಲ್ಲಿ ಪ್ರತ್ಯಕ್ಷವಾಗಿ ಬುಸುಗುಟ್ಟಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಮಧ್ಯಪ್ರದೇಶದ ಜಬಲ್ಪುರ್- ಮುಂಬೈ ನಡುವೆ ಸಂಚರಿಸುವ ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲಿನ ಎ.ಸಿ ಕೋಚ್‌ನಲ್ಲಿ ಮಹಾರಾಷ್ಟ್ರದ ಕಾಸರಾ ನಿಲ್ದಾಣದ ಬಳಿ ಇತ್ತೀಚೆಗೆ ಈ ಘಟನೆ ನಡೆದಿದೆ.

ಬೋಗಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾವು ಜನರ ಸಪ್ಪಳಕ್ಕೆ ಹೊರಗೆ ಬಂದು ಕಬ್ಬಿಣದ ಸರಳಿಗೆ ಸುತ್ತಿಕೊಂಡು ಬುಸುಗುಟ್ಟಿದೆ. ಇದರಿಂದ ಕೆಲಹೊತ್ತು ಪ‍್ರಯಾಣಿಕರು ಆತಂಕಗೊಂಡಿದ್ದರು. ಬಳಿಕ ಪ್ರಯಾಣಿಕರನ್ನು ಬೋಗಿಯಿಂದ ಇಳಿಸಿ ಹಾವು ಹಿಡಿಯುವರನ್ನು ಕರೆಯಿಸಿ ಹಾವನ್ನು ರಕ್ಷಿಸಿದ್ದಾರೆ.


ಈ ಕುರಿತು ಸುದ್ದಿಸಂಸ್ಥೆ ಪಿಟಿಐಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಕೇಂದ್ರ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷಿತ್ ಶ್ರೀವಾತ್ಸವ್ ಅವರು, ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಯಾವ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ ಎಂದು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries