ಲಾಹೋರ್: ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿದ ಪಂಜಾಬ್ ಪ್ರಾಂತ್ಯದ ವ್ಯಕ್ತಿಗೆ ಪಾಕಿಸ್ತಾನದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ಲಾಹೋರ್: ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿದ ಪಂಜಾಬ್ ಪ್ರಾಂತ್ಯದ ವ್ಯಕ್ತಿಗೆ ಪಾಕಿಸ್ತಾನದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ಧರ್ಮನಿಂದನೆ , ವಿಶೇಷವಾಗಿ ಪ್ರವಾದಿಯನ್ನು ಅವಮಾನಿಸುವುದು ಪಾಕಿಸ್ತಾನದಲ್ಲಿ ಮರಣದಂಡನೆ ವಿಧಿಸಬಹುದಾದ ಅಪರಾಧವಾಗಿದೆ.
ಪ್ರವಾದಿಯನ್ನು ಅವಮಾನಿಸಿದ ಆರೋಪದಲ್ಲಿ ಸರೈ ಅಲಂಗೀರ್‌ನ ನಿವಾಸಿ ಇರ್ಫಾನ್ ಎಂಬಾತನಿಗೆ ಅಲಂಗೀರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶಹಬಾಜ್ ಇಕ್ಬಾಲ್ ತರಾರ್ ಶುಕ್ರವಾರ ಮರಣದಂಡನೆ ವಿಧಿಸಿ ಆದೇಶಿಸಿದಾರೆ ಎಂದು ನ್ಯಾಯಾಲಯದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಅಲ್ಲದೇ ನ್ಯಾಯಾಲಯವು ಅಪರಾಧಿಗೆ ಒಂದು ಲಕ್ಷ (ಪಾಕಿಸ್ತಾನ ರೂಪಾಯಿ) ದಂಡವನ್ನೂ ವಿಧಿಸಿದೆ.
ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆಗ ನೀಡುವ ಮೂಲಕ ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಇರ್ಫಾನ್ ನನ್ನು ಈ ವರ್ಷ ಬಂಧಿಸಲಾಗಿತ್ತು.