ಮಟ್ಟಂಚೇರಿ: ಕಡಲತೀರಗಳ ಸ್ವಚ್ಛತೆ ಕಾಪಾಡಲು ಹಾಗೂ ಭೂ ಸಂರಕ್ಷಣೆಯ ಗುರಿಯನ್ನು ಪೀಳಿಗೆಗೆ ಹಸ್ತಾಂತರಿಸಲು ನಾವು ಸಿದ್ಧರಾಗಿರಬೇಕು ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದರು.
ಪೋರ್ಟ್ ಕೊಚ್ಚಿಯಲ್ಲಿ ಕಡಲ ತೀರದ ಸ್ವಚ್ಛತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾರದಲ್ಲಿ ಎರಡು ಗಂಟೆ ಸ್ವಚ್ಛತೆಗೆ ಮೀಸಲಿಡಬೇಕು. ನಮ್ಮ ತೀರಗಳು ಕಲುಷಿತಗೊಳ್ಳುವ ಮತ್ತು ವಿದೇಶಿಗರು ಅದನ್ನು ಸ್ವಚ್ಛಗೊಳಿಸುವ ಪರಿಸ್ಥಿತಿಯನ್ನು ತಪ್ಪಿಸಬೇಕು ಎಂದು ಸುರೇಶ್ ಗೋಪಿ ಹೇಳಿದರು.
ಪರಿಸರ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ರಾಜ್ಯದ ವಿವಿಧೆಡೆ ಇದೇ ರೀತಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೋಸ್ಟ್ ಗಾರ್ಡ್, ಸೇವಾ ಭಾರತಿ, ಗೈಡ್ಸ್, ಎನ್‍ಜಿಒಗಳು, ಸಾಂಸ್ಕøತಿಕ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಜಂಟಿಯಾಗಿ ಬೀಚ್ ಕ್ಲೀನಿಂಗ್ ನಡೆಸಿದರು. ಕೊಚ್ಚಿ ಕೋಸ್ಟ್ ಗಾರ್ಡ್ ಡಿಐಜಿಗಳಾದ ಎನ್. ರವಿ, ಶತ್ರಜಿತ್ ಸಿಂಗ್, ಡಾ. ಎನ್.ಸಿ. ಇಂದುಚೂಡನ್, ಕೊಚ್ಚಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಡ್ವ. ಪ್ರಿಯಾ ಪ್ರಶಾಂತ್, ನಗರಸಭೆ ವಿರೋಧ ಪಕ್ಷದ ನಾಯಕಿ ಅ. ಆಂಟೋನಿ ಕುರಿತಾರ, ಭಾರತ ಚೇಂಬರ್‍ನ ಮಾಜಿ ಅಧ್ಯಕ್ಷ ಭಾರತ್ ಎನ್. ಖೋನಾ, ಸಿ.ಜಿ. ರಾಜಗೋಪಾಲ್, ಅತಿಕಾಯನ್, ಮನೋಜ್ ಪೈ, ಸುಧೀಶ್ ಶೆಣೈ ನೇತೃತ್ವ ವಹಿಸಿದ್ದರು. ಮಾಜಿ ನಗರಸಭಾ ಸದಸ್ಯೆ ಶ್ಯಾಮಲಾ ಪ್ರಭು, ಫುಟ್ಬಾಲ್ ತರಬೇತುದಾರ ರೂಫಸ್ ಡಿಸೋಜಾ, ಕುಸ್ತಿ ತರಬೇತುದಾರ ಎಂ.ಎಂ. ಸಲೀಂ ಹಾಗೂ ಕರಾವಳಿ ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು.