ಪೆರ್ಲ:ಮನೆ ಸನಿಹದ ಸ್ನಾನದ ಗೃಹದಲ್ಲಿ ವಿಷಪೂರಿತ ಹಾವಿನ ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆ ಬಾಳೆಮೂಲೆ ಚಾಕಟೆ ನಿವಾಸಿ ದಿ. ಲಕ್ಷ್ಮೀ ಎಂಬವರ ಪುತ್ರಿ ಅಮ್ಮಕ್ಕು(65)ಮೃತಪಟ್ಟವರು.
ಮೂರು ವಾರದ ಹಿಂದೆ ಅಮ್ಮಕ್ಕು ಅವರಿಗೆ ಹಾವು ಕಡಿದಿತ್ತು. ಸಂಜೆ 4ರ ವೇಳೆಗೆ ಸ್ನಾನಕ್ಕಾಗಿ ಮನೆಯ ಸನಿಹದ ಸ್ನಾನಗೃಹಕ್ಕೆ ತೆರಳಿದ್ದ ಸಂದರ್ಭ ಹಾವು ಕಡಿದಿತ್ತು. ಅಮ್ಮಕ್ಕು ಬೊಬ್ಬಿಡುತ್ತಿದ್ದಂತೆ, ಮನೆಯವರು ಧಾವಿಸಿದಾಗ ಹಾವು ಕುರುಚಲು ಪೊದೆಯತ್ತ ಧಾವಿಸುವುದನ್ನು ಕಂಡಿದ್ದರು. ತಕ್ಷಣ ಇವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರಾವಸ್ಥೆ ಮುಂದುವರಿದ ಹಿನ್ನೆಲೆಯಲ್ಲಿ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.