ಜಿನೀವಾ: ಸ್ವಿಟ್ಜರ್‌ಲ್ಯಾಂಡ್‌ನ ವಿದೇಶಾಂಗ ಸಚಿವ ಇನಾಜಿಯೊ ಡ್ಯಾನಿಲೆ ಜಿಯೊವಾನಿ ಜೊತೆಗೆ, ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ವಾಣಿಜ್ಯ ವಹಿವಾಟು ಒಳಗೊಂಡು ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಇಲ್ಲಿ ಚರ್ಚಿಸಿದರು.
ಜಿನೀವಾ: ಸ್ವಿಟ್ಜರ್‌ಲ್ಯಾಂಡ್‌ನ ವಿದೇಶಾಂಗ ಸಚಿವ ಇನಾಜಿಯೊ ಡ್ಯಾನಿಲೆ ಜಿಯೊವಾನಿ ಜೊತೆಗೆ, ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ವಾಣಿಜ್ಯ ವಹಿವಾಟು ಒಳಗೊಂಡು ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಇಲ್ಲಿ ಚರ್ಚಿಸಿದರು.
ಭಾರತ ಮತ್ತು ನಾಲ್ಕು ಐರೋಪ್ಯ ದೇಶಗಳ ಒಕ್ಕೂಟವಾದ ಇಎಫ್‌ಟಿಎ ಜೊತೆಗಿನ ವಾಣಿಜ್ಯ ಒಪ್ಪಂದವನ್ನು ಕೇಂದ್ರವಾಗಿಸಿಕೊಂಡು ಈ ಮಾತುಕತೆ ನಡೆಯಿತು.
ಐರೋಪ್ಯ ಮುಕ್ತ ವಾಣಿಜ್ಯ ಒಕ್ಕೂಟ (ಇಎಫ್‌ಟಿಎ) ಜೊತೆಗೆ ಭಾರ ಕಳೆದ ಮಾರ್ಚ್ ತಿಂಗಳಲ್ಲಿ ವಾಣಿಜ್ಯ ಮತ್ತು ಆರ್ಥಿಕ ಪಾಲುದಾರಿಕೆ ಕುರಿತು ಒಪ್ಪಂದಕ್ಕೆ ಸಹಿ ಹಾಕಿತ್ತು. ಒಕ್ಕೂಟದ ನಾಲ್ಕು ರಾಷ್ಟ್ರಗಳಿಂದ ಸುಮಾರು 100 ಬಿಲಿಯನ್ ಡಾಲರ್ ಹೂಡಿಕೆಯಾಗಿತ್ತು.
ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದೆ. ವಿವಿಧ ಕ್ಷೇತ್ರಗಳನ್ನು ಒಳಗೊಂಡು ಉಭಯ ನಾಯಕರು ವಿಸ್ತೃತ ಚರ್ಚೆ ನಡೆಸಿದರು ಎಂದು ತಿಳಿಸಿದೆ.
ಪ್ರವಾಸದ ಅವಧಿಯಲ್ಲಿ ಜೈಶಂಕರ್ ಅವರು ವಿಶ್ವಸಂಸ್ಥೆಯ ಹೈಕಮಿಷನರ್, ವಿಶ್ವ ಆರೋಗ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೇರಿ ಹಲವು ಪ್ರಮುಖರ ಜೊತೆಗೂ ಚರ್ಚಿಸಿದರು.
ಇದೇ ವೇಳೆ ಅವರು ಜಿನೀವಾದ ಪರ್ಮನೆಂಟ್ ಮಿಷನ್ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಎಂದು ಹೇಳಿಕೆ ತಿಳಿಸಿದೆ.