ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೊವ್ವಲ್‍ನಲ್ಲಿ ಗೃಹಿಣಿ ತಲೆಗೆ ಗಂಭೀರ ಗಾಯಗೊಂಡು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊವ್ವಲ್ ಪೆಟ್ರೋಲ್ ಪಂಪ್ ಸನಿಹದ ನಿವಾಸಿ ಅಬ್ದುಲ್ಲಕುಞÂ ಅವರ ಪತ್ನಿ ನಫೀಸಾ(62)ಮೃತಪಟ್ಟವರು. ಪ್ರಕರಣಕ್ಕೆ ಸಂಬಂಧಿಸಿ ಇವರ ಪುತ್ರ ನಾಸರ್ ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಯಿಯನ್ನು ಮಣ್ಣಿನ ಬಟ್ಟಿಯಿಂದ ಹಲ್ಲೆಗೈಯುವುದನ್ನು ತಡೆಯಲು ಯತ್ನಿಸಿದ್ದ ಹಿರಿಯ ಪುತ್ರ ಮಜೀದ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ನಾಸರ್‍ನನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.