ಕೊಚ್ಚಿ: ನಟ ವಿನಾಯಕನ್ ಅವರನ್ನು ಹೈದರಾಬಾದ್ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ಸಂಜೆ ಬಂಧಿಸಲಾಗಿದೆ.
ವಿನಾಯಕನ್ ಕೊಚ್ಚಿ ವಿಮಾನ ನಿಲ್ದಾಣದಿಂದ ಗೋವಾಗೆ ತೆರಳುತ್ತಿದ್ದರು. ಸಂಪರ್ಕ ವಿಮಾನವು ಹೈದರಾಬಾದ್‍ನಿಂದ ಬಂದಿತ್ತು. ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.
ಮಾತಿನ ಚಕಮಕಿಯಲ್ಲಿ ಸಿಐಎಸ್‍ಎಫ್ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿನಾಯಕನ್ ಆರೋಪಿಸಿದ್ದಾರೆ. ಗೋವಾದಲ್ಲಿ ನೆಲೆಸಿರುವ ವಿನಾಯಕನ್ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದು ಮರಳುವಾಗ ಘಟನೆ ನಡೆದಿದೆ.