ಕಾಸರಗೋಡು: ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಞಂಗಾಡು ರಾಷ್ಟ್ರೀಯ ಆರೋಗ್ಯ ಮಿಷನ್ ಸಭಾಂಗಣದಲ್ಲಿ ಜರುಗಿತು. ನಗರಸಭಾ ಆರೋಗ್ಯ ಸಮಿತಿಯ ಅಧ್ಯಕ್ಷೆ ಸರಸ್ವತಿ ಕೆ.ವಿ ಸಮಾರಂಭ ಉದ್ಘಾಟಿಸಿದರು. ಕಾಞಂಗಾಡು ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ. ಜೀಜಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ನೋಡಲ್ ಅಧಿಕಾರಿ ಡಾ. ಸನ್ನಿ ಮ್ಯಾಥ್ಯೂ ದಿನ ಸಂದೇಶ ನೀಡಿದರು.
ದಿನಾಚರಣೆ ಅಂಗವಾಗಿ ಎಂಎಲ್‍ಎಸ್‍ಪಿ ಸಿಬ್ಬಂದಿ ಮತ್ತು ನಸಿರ್ಂಗ್ ವಿದ್ಯಾರ್ಥಿಗಳಿಗಾಗಿ ಜಾಗೃತಿ ವಿಚಾರ ಸಂಕಿರಣ ನಡೆಸಲಾಯಿತು. 'ಮಾನಸಿಕ ಆರೋಗ್ಯ: ಒಂದು ಅವಲೋಕನ' ಕುರಿತು ಡಿ.ಎಂ. ಎಚ್. ಪಿ.ನೋಡಲ್ ಅಧಿಕಾರಿ ಡಾ. ಸನ್ನಿ ಮ್ಯಾಥ್ಯೂ, ಆತ್ಮಹತ್ಯೆ ಮತ್ತು ತಡೆಗಟ್ಟುವ ಚಟುವಟಿಕೆಗಳು' ಕುರಿತು ಜನರಲ್ ಆಸ್ಪತ್ರೆಯ ಮನೋವೈದ್ಯ ಡಾ. ಶ್ರೀಜಿತ್ ಕೃಷ್ಣನ್, ಬೇಸಿಕ್ ಕೌನ್ಸೆಲಿಂಗ್ ಸ್ಕಿಲ್ಸ್ ವಿಷಯದಲ್ಲಿ ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಅಲ್ಬಿನ್ ಎಲ್ಡೋಸ್ ಹಾಗೂ ಮನೋವೈದ್ಯಕೀಯ ಸಮಾಜ ಸೇವಕಿ ರಿನ್ಸ್ ಮಣಿ ತರಗತಿ ನಡೆಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್‍ನ್ಯಾಷನಲ್ ಅಸೋಸಿಯೇಷನ್ ನೇತೃತ್ವದಲ್ಲಿ, 2003 ರಿಂದ ಪ್ರತಿ ವರ್ಷ ಸೆಪ್ಟೆಂಬರ್ 10ನೇ ತಾರೀಕನ್ನು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವಾಗಿ ಆಚರಿಸಲಾಗುತ್ತಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಆ. ಎ.ವಿ ರಾಮದಾಸ್ ತಿಳಿಸಿದರು.