ತಿರುವನಂತಪುರಂ: ಪೋಲೀಸರು ತಮ್ಮ ಹಣೆಯ ಶ್ರೀಗಂಧವನ್ನು ಮುಟ್ಟಬಾರದು ಅಥವಾ ಕೈಗೆ ದಾರವನ್ನು ಕಟ್ಟಬಾರದು ಎಂದು ಕೇರಳದ ಖ್ಯಾತ ಸಂತ ಸಂದೀಪಾನಂದಗಿರಿ ಸೂಚಿಸಿದ್ದಾರೆ.
ಚಾನೆಲ್ ಒಂದರಲ್ಲಿ ನಡೆದ ಚರ್ಚೆಯೊಂದರಲ್ಲಿ ಮಾತನಾಡಿರುವ ಅವರು, ಹೀಗೆ ಮಾಡುವ ಪೆÇಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಜನರು ಭಯಪಡುತ್ತಾರೆ ಎಂದು ಹೇಳಿದರು. ಸಂದೀಪಾನಂದ ಗಿರಿ ಅವರ ಹಣೆಗೆ ಶ್ರೀಗಂಧ ಹಚ್ಚಿದ್ದಕ್ಕೆ ಹೊಸ ಫತ್ವಾ ಹೀಗೆ ಹೊರಬಂದಿದೆ.
ತಮ್ಮ ಆಶ್ರಮಕ್ಕೆ ಬೆಂಕಿ ಹಚ್ಚಲು ಪೋಲೀಸರು ಯತ್ನಿಸಿದ್ದಾರೆ ಎಂಬ ಆರೋಪವನ್ನು ಪುನರುಚ್ಚರಿಸಿದ ಸಂದೀಪಾನಂದ ಗಿರಿ ಅವರು, ಬಳಿಕ ಪಿಣರಾಯಿ, ಪೆÇಲೀಸರಿಂದ ಕ್ಲಿಯರೆನ್ಸ್ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಎಡಿಜಿಪಿ ಅಜಿತ್ ಕುಮಾರ್ ಅವರನ್ನು ಬದಲಾಯಿಸಬೇಕೆ ಎಂಬ ಪ್ರಶ್ನೆಗೆ, ನಾವು ಅದಕ್ಕೆ ಉತ್ತರಿಸಲು ಅರ್ಹರಲ್ಲ ಎಂದು ಹೇಳಿದರು.