ನವದೆಹಲಿ: ವಕ್ಫ್ ಕಾಯ್ದೆ 2013ಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವಲ್ಲಿ ಆಗುತ್ತಿವ ವಿಳಂಬದ ಕುರಿತು ವಿವರಣೆ ನೀಡಿ ಎಂದು ರಾಜ್ಯಸಭೆಯ ಸಂಸದೀಯ ಸಮಿತಿಯು ಬುಧವಾರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದೆ.
ಈ ಸಂಬಂಧ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ನೋಟಿಸ್ ಅನ್ನೂ ನೀಡಿದೆ.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು, ತಿದ್ದುಪಡಿ ಮಸೂದೆಯನ್ನು ಪರಾಮರ್ಶಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ಈ ವಿಷಯವು ಜಂಟಿ ಸಂಸದೀಯ ಸಮಿತಿಯ ಮುಂದೆ ಇರುವಾಗಲೇ ರಾಜ್ಯಸಭೆಯ ಸಂಸದೀಯ ಸಮಿತಿಯು ಈ ಕ್ರಮ ಕೈಗೊಂಡಿದೆ.
ಇದರೊಂದಿಗೆ, 2006ರ ದಂಡು ಪ್ರದೇಶ ಕಾಯ್ದೆಗೆ ನಿಯಮಗಳನ್ನು ರೂಪಿಸುವ ಕಾರ್ಯವನ್ನು ಪೂರ್ಣಗೊಳಿಸಲು ತಡವಾಗುತ್ತಿರುವುದರ ಕುರಿತೂ ರಾಜ್ಯಸಭೆಯ ಸಂಸದೀಯ ಸಮಿತಿಯು ರಕ್ಷಣಾ ಸಚಿವಾಲಯಕ್ಕೆ ನೋಟಿಸ್ ನೀಡಿದೆ.