ಕಾಸರಗೋಡು: ಪ್ರಧಾನಮಂತ್ರಿಯವರು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ನೀಡಿರುವ ಆಹ್ವಾನದನ್ವಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನೆರಳಿನ ಮರ ನೆಡುವುದರ ಜತೆಗೆ ಆಸನ ವ್ಯವಸ್ಥೆ ಅಳವಡಿಸುವ ಯೋಜನೆಗೆ ಚಾಲನೆ ನೀಡಲಾಯಿತು. ದೇಶಾದ್ಯಂತ 'ತಾಯಿ ಹೆಸರಲ್ಲಿ ಒಂದು ಮರ'ಅಭಿಯಾನದಂಗವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲಪ್ಪಾಡಿ-ಚೆರ್ಕಳ ರೀಚ್ ಕಾಮಗಾರಿ ಗುತ್ತಿಗೆದಾರ ಕಂಪೆನಿ ಊರಾಲುಂಗಾಲ್ ಲೇಬರ್ ಕಾಂಟ್ರಾಕ್ಟಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗಿಯಾಗಿತ್ತು. ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸಸಿ ನೆಡುವ ಯೋಜನೆಗೆ ಜಿಲ್ಲಾಧಿಕರಿ ಕೆ. ಇನ್ಬಾಶೇಖರ್ ಚಾಲನೆ ನೀಡಿದರು. ಕಾಸರಗೋಡು ನವ ಕೇರಳ ಮಿಷನ್ ಸಂಯೋಜಕ ಕೆ. ಬಾಲಕೃಷ್ಣನ್ ಯೋಜನೆ ಕುರಿತು ಮಾಹಿತಿ ನೀಡಿದರು. ಉರಾಲುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.