ತಿರುವನಂತಪುರಂ: ಕೇರಳದಲ್ಲಿ ಸೈಬರ್ ಕ್ರಿಮಿನಲ್‍ಗಳು ಅಟ್ಟಹಾಸ ಮೆರೆದಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಬಂಧನ ಸೇರಿದಂತೆ ಸೈಬರ್ ವಂಚನೆ ಇದೀಗ ಕೇರಳದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ಸಂಗೀತ ನಿರ್ದೇಶಕ ಜೆರ್ರಿ ಅಮಲ್ ದೇವ್ ಮೊನ್ನೆ ಡಿಜಿಟಲ್ ಬಂಧನದಲ್ಲಿ ಆರ್ಥಿಕ ವಂಚನೆಗೆ ಬಲಿಯಾಗಿದ್ದರು.
ರಾಜ್ಯದಲ್ಲಿ ವ್ಯಾಪಕವಾಗಿರುವ ಡಿಜಿಟಲ್ ಬಂಧನಗಳ ಬಗ್ಗೆ ತಿಂಗಳ ಹಿಂದೆಯೇ ಸಮರಸ ಸುದ್ಧಿ ವರದಿ ಮಾಡಿತ್ತು. ಉತ್ತರ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಡಿಜಿಟಲ್ ಬಂಧನದ ವ್ಯಾಪಕ ಸೈಬರ್ ವಂಚನೆ ಕುರಿತು ನೀಡಿದ ಎಚ್ಚರಿಕೆ ಇದೀಗ ಕೇರಳದಲ್ಲಿ ನೈಜವಾಗುತ್ತಿದೆ.
ಯಾಕೋಬಯ ಸಭಾ ನಿರಣಂ ಡಾ ಗೀವರ್ಗೀಸ್ ಮಾರ್ ಕೊರಿಲೋಸ್ ಅವರನ್ನು ಕೆಲವು ವಾರಗಳ ಹಿಂದೆ ಡಿಜಿಟಲ್ ಮೂಲಕ ಬಂಧಿಸಿ 15 ಲಕ್ಷ ರೂಪಾಯಿಗೂ ಹೆಚ್ಚು ಸುಲಿಗೆ ಮಾಡಲಾಗಿತ್ತು. ನಕಲಿ ಕರೆಗಳ ಮೂಲಕ ಪ್ರಮುಖರಿಗೆ ಕರೆ ಮಾಡಿ ತನಿಖಾಧಿಕಾರಿಗಳೆಂದು ಪರಿಚಯಿಸಿ ವಿವಿಧ ಪ್ರಕರಣಗಳಲ್ಲಿ ಆರೋಪಿಗಳೆಂದು ನಂಬಿಸಿ ಮಾನಸಿಕವಾಗಿ ಒಡೆದು ಬ್ಲಾಕ್ ಮೇಲ್ ಮಾಡುವುದು ಇವರ ವಿಧಾನ. ಸಾಮಾನ್ಯವಾಗಿ ಪ್ರಕರಣದಿಂದ ಪಾರಾಗಲು ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಹೆಚ್ಚಿನ ತಾಂತ್ರಿಕ ಜ್ಞಾನವಿಲ್ಲದ ಜನರು ಕೇಳಿದ ಮೊತ್ತವನ್ನು ಒತ್ತಡದಲ್ಲಿ ವರ್ಗಾಯಿಸುತ್ತಾರೆ. ವಂಚನೆ ಬಳಿಕವಷ್ಟೇ ತಿಳಿಯುತ್ತದೆ.