ಕಾಸರಗೋಡು: ಶೈಕ್ಷಣಿಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಕೆ-ಟಿಇಟಿ(ಕೆ-ಟೆಟ್) 2024ರ ಏಪ್ರಿಲ್‍ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಭಾಗವಹಿಸಿದವರ ಪ್ರಮಾಣಪತ್ರ ಪರಿಶೋಧನೆ ಸೆಪ್ಟೆಂಬರ್ 26 ಮತ್ತು 27 ರಂದುನಡೆಯಲಿದೆ. 26 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ಕ್ಯಾಟಗರಿ-1, ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ಕ್ಯಾಟಗರಿ 2, 27ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಕ್ಯಾಟಗರಿ-ಮೂರು ಹಾಗೂ ಮಧ್ಯಾಹ್ನ 12ರಿಂದ 3ರವರೆಗೆ ಕ್ಯಾಟಗರಿ-ನಾಲ್ಕು ಕ್ರಮಾಂಕದಲ್ಲಿ ನಡೆಯಲಿದೆ.
ಹಿಂದಿನ ವರ್ಷಗಳಲ್ಲಿ ಕೆ-ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಮತ್ತು ಈ ದಿನಗಳಲ್ಲಿ ಪ್ರಮಾಣಪತ್ರ ಪರೀಕ್ಷೆಯನ್ನು ಪೂರ್ಣಗೊಳಿಸದಿರುವವರು ಪ್ರಮಾಣಪತ್ರ ಪರಿಶೀಲನೆಗೆ ಹಾಜರಾಗಬೇಕು. ಅರ್ಹ ಅಭ್ಯರ್ಥಿಗಳು ಹಾಲ್ ಟಿಕೆಟ್, ಮೂಲ ಪ್ರಮಾಣ ಪತ್ರಗಳು, ಅಂಕಪಟ್ಟಿ, ಜಾತಿ ಸಡಿಲಿಕೆ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230053)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.