ಕಾಸರಗೋಡು: ನ್ಯಾಷನಲ್ ವಿಶ್ವಕರ್ಮ ಫೆಡರೇನ್(ಎನ್‍ವಿಎಫ್) ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿಶ್ವಕರ್ಮ ಪೂಜೆ ಹಾಗೂ ವಿಶ್ವಕರ್ಮ ದಿನಾಚರಣೆಯನ್ನು ಕಾಸರಗೋಡು ಎನ್‍ವಿಎಫ್ ಕಚೇರಿಯಲ್ಲಿ ಜರುಗಿತು.
ಸಂಘಟನೆ ಕೇಂದ್ರ ಸಮಿತಿ ಅಧ್ಯಕ್ಷ ಸೀತಾರಾಮ ಆಚಾರ್ಯ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಜಯಶೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಾಘವನ್ ಕೊಳತ್ತೂರು ಮುಖ್ಯ ಭಾಷಣ ಮಾಡಿದರು.
ಕೇಂದ್ರ ಸಮಿತಿ ಕೋಶಾಧಿಕಾರಿ ರಾಘವನ್ ದೊಡ್ಡುವಯಲ್, ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ವಾಸಂತಿ ಜನಾರ್ದನ್, ಉಪಾಧ್ಯಕ್ಷರಾದ ವಿಷ್ಣು ಆಚಾರ್ಯ, ರಾಜ್ಯ ಸಮಿತಿ ಜತೆ ಕಾರ್ಯದರ್ಶಿ ನಿಶಾ ಚಂದ್ರನ್, ರಾಮಕೃಷ್ಣನ್ ಎ.ಕೆ., ವಾಮನ ಆಚಾರ್ಯ, ರಾಜನ್ ಮನ್ನಿಪ್ಪಾಡಿ ಪುರುಷೋತ್ತಮ ಆಚಾರ್ಯ, ವಿಜಯಾ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲ ಸಮಿತಿ ಕಾರ್ಯದರ್ಶಿ ಶ್ಯಾಮಲಾ ಸಊರ್ಯನ್ ಸ್ವಾಗತಿಸಿದರು. ಕೋಶಾಧಿಕಾರಿ ವಿಜಯನ್ ಪಿ.ಕೆ ವಂದಿಸಿದರು.