ಕೊಲ್ಲಂ: ಶಾಸ್ತಮಕೋಟ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಸಂಪ್ರದಾಯ ತಪ್ಪಿಸದೆ ವಾನರಸದ್ಯ ನಡೆಯಿತು. ಉತ್ರಾಡಂ ದಿನ ಮತ್ತು ತಿರುಓಣಂನಲ್ಲಿ ಇಲ್ಲಿ ಕಪಿವೃಂದಗಳಿಗೆ ಓಣಂಸದ್ಯ ವಿತರಿಸಲಾಗುತ್ತದೆ. ಕೋತಿ ಹಬ್ಬವನ್ನು ನೋಡಲು ದೂರದ ಊರುಗಳಿಂದ ಸಾಕಷ್ಟು ಜನರು ದೇವಸ್ಥಾನಕ್ಕೆ ಆಗಮಿಸಿದ್ದರು.
ತುμÁನಿಲದಲ್ಲಿ ಅನ್ನ, ಅವಿಲ್, ಕಲಸುಕರಿಬೇವು ಪಲ್ಯ, ಕಾಯಿ, ಹಪ್ಪಳ, ಸಾಂಬಾರ್, ಪಲ್ಯ ಸೇರಿದಂತೆ ಸಿಹಿ ಪದಾರ್ಥಗಳನ್ನು ತಯಾರಿಸಿ ಕಪಿಗಳಿಗೆ ನೀಡಲಾಗುತ್ತದೆ. ಬಡಿಸಿದ ತಕ್ಷಣ ಗುಂಪಿನ ನಾಯಕ ಬಂದು ರುಚಿ ನೋಡಿದ ನಂತರ ಇಡೀ ವಾನರಪಡೆ ಸಾಲಾಗಿ ಜೋಡಿಸಿರುವ ಎಲೆಗಳ ಮುಂದೆ ಆಹಾರ ಸವಿಯುವುದು ಇಲ್ಲಿಯ ವೈಶಿಷ್ಟ್ಯ. ಉತ್ರಾಡಂ(ನಿನ್ನೆ) ಮತ್ತು ತಿರುವೋಣಂ(ಇಂದು) ಎಲ್ಲಾ ಭಕ್ಷ್ಯಗಳೊಂದಿಗೆ ಔತಣವನ್ನು ಬಡಿಸಲಾಗುತ್ತದೆ.
ಶಾಸ್ತಮಕೋಟದ ವಾನರ ಸೇನೆ ಗೌಜು-ಗದ್ದಲಗಳೊಂದಿಗೆ, ಸ್ನೇಹಿತರನ್ನು ಮಾತನಾಡಿಸಿ ಪರಸ್ಪರ ಶುಭ ಹಾರೈಸುತ್ತಾ ಮೋಜು ಮಸ್ತಿ ಮಾಡಿ ಊಟ ಸವಿಯುತ್ತವೆ. ಇದು ಕೇರಳದ ಯಾವುದೇ ದೇವಾಲಯದಲ್ಲಿ ಕಾಣದ ದೃಶ್ಯ. ಓಣದ ದಿನ ಮಾತ್ರವಲ್ಲದೇ ದೇವಸ್ಥಾನದಲ್ಲಿ ಪ್ರತಿನಿತ್ಯ ವಾನರ ಸಾಮಾನ್ಯ ಭೋಜನ ನಡೆಯುತ್ತದೆ.ಇಲ್ಲಿಯ ವಾನರರನ್ನು ಶ್ರೀರಾಮಸ್ವಾಮಿಯ ಸಂಗಡಿಗರಾಗಿ ಭಕ್ತರು ನೋಡುತ್ತಾರೆ.