ಬದಿಯಡ್ಕ: ಕನ್ಯಪ್ಪಾಡಿ ಕರ್ಕಡಪಳ್ಳ ನಿವಾಸಿ ಶ್ರೀಧರ ಎಂಬವರ ಪುತ್ರ, ಬದಿಯಡ್ಕದಲ್ಲಿ ಆಟೋರಿಕ್ಷಾ ಚಾಲಕರಾಗಿರುವ ನಿತಿನ್ ಕುಮಾರ್(29)ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕದ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಇವರು ಬದಿಯಡ್ಕ ಮೇಲಿನ ಪೇಟೆಯಲ್ಲಿ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಆಟೋರಿಕ್ಷಾದೊಂದಿಗೆ ತೆರಳಿದ್ದ ಇವರು, ವಾಪಾಗಿರಲಿಲ್ಲ. ಇವರ ಮೊಬೈಲ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆ. ಬದಿಯಡ್ಕದ ಸಮುದಯ ಆರೋಗ್ಯ ಕೇಂದ್ರದ ಸನಿಹದ ವ್ಯಕ್ತಿಯೊಬ್ಬರ ಮನೆ ಸನಿಹ ಆಟೋರಿಕ್ಷಾ ಪತ್ತೆಯಾಗಿದೆ. ಇವರ ಸಂಬಂಧಿ ಭಾಸ್ಕರ ಎಂಬವರ ದೂರಿನ ಮೇರೆಗೆ ಕೇಸು ದಆಖಲಾಗಿದೆ. ಸೈಬರ್ ಸೆಲ್ ಸಹಾಯದೊಂದಿಗೆ ಹುಡುಕಾಟ ನಡೆಯುತ್ತಿದೆ.