ನವದೆಹಲಿ : ಚಪಾತಿ ರೊಟ್ಟಿ ಭಾರತೀಯ ಆಹಾರದ ಭಾಗವಾಗಿದೆ. ದಕ್ಷಿಣದಲ್ಲಿ ಸ್ವಲ್ಪ ಕಡಿಮೆ ತಿನ್ನುತ್ತಾರೆ, ಆದರೆ ಉತ್ತರದಲ್ಲಿ ಬಹಳಷ್ಟು ಜನ ರೋಟಿ ತಿನ್ನುತ್ತಾರೆ. ಆದ್ರೆ, ಅನೇಕರು ಇವುಗಳನ್ನ ತವ ಮೇಲೆ ಸುಡುವ ಬದಲು ನೇರವಾಗಿ ಉರಿಯುವ ಬೆಂಕಿಗೆ ಇಟ್ಟು ಸುಡುತ್ತಾರೆ.

ಇದು ಅನೇಕ ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದರೂ, ಜ್ವಾಲೆಯ ಮೇಲೆ ನೇರವಾಗಿ ಚಪಾತಿ ಬೇಯಿಸುವುದು ಕ್ಯಾನ್ಸರ್'ಗೆ ಕಾರಣವಾಗಬಹುದು ಎಂದು ಸಂಶೋಧನೆ ಹೇಳಿದೆ.
ಜರ್ನಲ್ ಆಫ್ ಫುಡ್ ಸೈನ್ಸ್'ನಲ್ಲಿ ಪ್ರಕಟವಾದ ಅಧ್ಯಯನವು ಚಪಾತಿ ಅಥವಾ ಯಾವುದೇ ಆಹಾರ ಪದಾರ್ಥವನ್ನ ನೇರವಾಗಿ ಬೆಂಕಿಯ ಮೇಲೆ ಹೆಚ್ಚಿನ ತಾಪಮಾನದಲ್ಲಿ ಬೇಯಿಸುವುದು ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತೀರ್ಮಾನಿಸಿದೆ. ಡಾ. JS ಲೀ, JH ಕಿಮ್, YJ ಲೀ "ಅಡುಗೆ ಸಮಯದಲ್ಲಿ ಆಹಾರದಲ್ಲಿ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ (PAHs) ರಚನೆ" (ವರದಿ ) ಕುರಿತ ಅಧ್ಯಯನದಲ್ಲಿ ಭಾಗವಹಿಸಿದ್ದರು.
ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ಅಸಿಲಾಮೈಡ್, ಹೆಟೆರೊಸೈಕ್ಲಿಕ್ ಅಮೈನ್ಸ್ (HCA), ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAH) ( ವರದಿ ) ನಂತಹ ಕ್ಯಾನ್ಸರ್-ಉಂಟುಮಾಡುವ ಸಂಯುಕ್ತಗಳನ್ನ ಸಹ ಉತ್ಪಾದಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೇ ನೇರವಾಗಿ ಬೆಂಕಿಯಲ್ಲಿ ಮಾಂಸವನ್ನ ಹುರಿಯುವುದರಿಂದ ಕ್ಯಾನ್ಸರ್ ಕಾರಕಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಸಲಾಗಿದೆ.