ತಿರುವನಂತಪುರಂ: ಪತ್ತನಂತಿಟ್ಟ ಎಸ್ಪಿ ಸುಜಿತ್ ಅವರು ಶಾಸಕ ಪಿವಿ ಅನ್ವರ್ ಅವರೊಂದಿಗೆ ನಡೆಸಿರುವ ದೂರವಾಣಿ ಸಂಭಾಷಣೆ ಬೆಳಕಿಗೆ ಬಂದ ಬಳಿಕ ರಜೆಯ ಮೇಲೆ ತೆರಳಿದ್ದಾರೆ.
ಮೂರು ದಿನಗಳ ರಜೆಯ ಮೇಲೆ ತೆರಳಿದ್ದಾರೆ. ಎಡಿಜಿಪಿ ಎಂಆರ್ ಅಜಿತ್ ಕುಮಾರ್ ವಿರುದ್ಧ ಎಸ್ಪಿ ಗಂಭೀರ ಆರೋಪ ಮಾಡಿರುವ ಆಡಿಯೋ ಹೊರಬಿದ್ದಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪಿ.ಶಶಿ ಅವರ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸುವ ಎಡಿಜಿಪಿ ಅಜಿತ್ ಕುಮಾರ್ ಅವರು ಪೋಲೀಸರಲ್ಲಿ ಸರ್ವಶಕ್ತರು ಎಂದು ಸುಜಿತ್ ದಾಸ್ ದೂರವಾಣಿ ಸಂಭಾಷಣೆಯಲ್ಲಿ ಹೇಳುತ್ತಾರೆ. ಉದ್ಯಮಿಗಳೆಲ್ಲ ಅಜಿತ್‍ಕುಮಾರ್ ಸ್ನೇಹಿತರು ಎಂದು ಅನ್ವರ್ ಹೇಳಿದಾಗ, ಸುಜಿತ್ ದಾಸ್ ಅದನ್ನು ಖಚಿತಪಡಿಸಿದ್ದಾರೆ.
ಇದೇ ವೇಳೆ ಶಾಸಕ ಪಿ.ವಿ.ಅನ್ವರ್ ಮಾಡಿರುವ ಭ್ರಷ್ಟಾಚಾರ ಆರೋಪದಲ್ಲಿ ಪೋಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಸುಳಿವು ಸಿಕ್ಕಿದೆ. ಪಿವಿ ಅನ್ವರ್ ಎಡಿಜಿಪಿಎಂ ಆರ್ ಅಜಿತ್ ಕುಮಾರ್ ಮತ್ತು ಪತ್ತನಂತಿಟ್ಟ ಎಸ್ಪಿ ಸುಜಿತ್ ದಾಸ್ ವಿರುದ್ಧ ದೊಡ್ಡ ಪ್ರಮಾಣದ ಹಣಕಾಸು ಆರೋಪವನ್ನು ಎತ್ತಿದ್ದರು. ಪೋನ್ ಸಂಭಾಷಣೆಯ ಧ್ವನಿ ಸಂದೇಶ ಹೊರಬಿದ್ದ ನಂತರ, ಡಿಜಿಪಿ ಎಡಿಜಿಪಿ ಮತ್ತು ಸುಜಿತ್ ವಿರುದ್ಧ ದೂರುಗಳನ್ನು ಸ್ವೀಕರಿಸಿದ್ದಾರೆ.
ಉನ್ನತ ಪೆÇಲೀಸ್ ಅಧಿಕಾರಿಗಳ ವಿರುದ್ಧ ಆಡಳಿತ ಪಕ್ಷದ ಶಾಸಕ ಪಿವಿ ಅನ್ವರ್ ಮಾಡಿರುವ ಸಾರ್ವಜನಿಕ ಭ್ರμÁ್ಟಚಾರ ಆರೋಪಗಳು ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಸಿಪಿಎಂ ಜಿಲ್ಲಾ ನಾಯಕತ್ವ ಪಿ.ವಿ.ಅನ್ವರ್ ಅವರನ್ನು ಕರೆಸಿ ಮಾತನಾಡಿದರು. ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಎರಡು ಕೋಟಿ ಭ್ರಷ್ಟಾಚಾರ ಹಾಗೂ ಸುಜಿತ್ ದಾಸ್ ಪೆÇಲೀಸ್ ಕ್ಯಾಂಪ್ ಕಚೇರಿಯಲ್ಲಿ ಮರ ಕಡಿದಿದ್ದಾರೆ ಎಂದು ಪಿವಿ ಅನ್ವರ್ ಆರೋಪಿಸಿದ್ದಾರೆ.