HEALTH TIPS

ಇರಿಯಣ್ಣಿ ಪ್ರದೇಶದ ಸಿಸಿ ಕ್ಯಾಮರಾದಲ್ಲಿ ಚಿರತೆ ಸಂಚಾರದ ದೃಶ್ಯ ಸೆರೆ-ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕು


ಕಾಸರಗೋಡು: ಬೋವಿಕ್ಕಾನ ಸನಿಹ ಇರಿಯಣ್ಣಿ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಸ್ಥಾಫಿಸಿರುವ ಸಿಸಿ ಕ್ಯಾಮರಾದಲ್ಲಿ  ಚಿರತೆ ಸಂಚಾರದ ದೃಶ್ಯ ಪತ್ತೆಯಾಗಿದೆ. ಕೆಲವೇ ದಿವಸಗಳ ಹಿಂದೆ ಈ ಪ್ರದೇಶದಲ್ಲಿ  ಚಿರತೆಯದ್ದೆನ್ನಲಾದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸಿಸಿ ಕ್ಯಾಮರಾದಲ್ಲಿ ಚಿರತೆ ಕಾಣಿಸಿಕೊಳ್ಳುವ ಮೂಲಕ ಚಿರತೆ ಸಂಚಾರ ಖಚಿತಗೊಂಡಿದೆ.

ಇರಿಯಣ್ಣಿ ಸನಿಹದ ಕುಣಿಯೇರಿ ಎಂಬಲ್ಲಿ ಕೆಲವು ದಿವಸಗಳ ಹಿಂದೆ ಚಿರತೆಯನ್ನು ಕಂಡಿರುವುದಾಗಿ ವದಂತಿ ಹರಡಿತ್ತು. ಇಲ್ಲಿಂದ ಒಂದು ಕಿ.ಮೀ ದೂರದ ಅನಿಲ್‍ಕುಮಾರ್ ಎಂಬವರ ತೋಟದಲ್ಲಿ ಚಿರತೆ ಹೆಜ್ಜೆಗುರುತು ಕಾಣಿಸಿಕೊಂಡಿದ್ದು, ಸ್ಥಳೀಯ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿತ್ತು. ಚಿರತೆ ಪತ್ತೆಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುವ ಮಧ್ಯೆ ಸಿಸಿ ಕ್ಯಾಮರದಲ್ಲೂ ಕಾಣಿಸಿಕೊಂಡಿರುವುದರಿಂದ ಚಿರತೆ ಪತ್ತೆಕಾರ್ಯ ಚುರುಕುಗೊಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries